ಮಹಿಳೆಯರಿಗೆ ಸೀರೆ.. ಚಿನ್ನಾಭರಣೆ ಅಂದ್ರೆ ಎಲ್ಲಿಲ್ಲದ ಪ್ರೀತಿ.. ಈಗಾಗಲೇ ಚಿನ್ನದ ಬೆಲೆ ಗಗನಕ್ಕೇರಿದೆ.. ಇದ್ರ ಬೆನ್ನಲ್ಲೇ ಕೇದ್ರ ಸರ್ಕಾರ ಕೂಡ ಕಸ್ಟಮ್ ಸುಂಕ ಹೆಚ್ಚಳ ಮಾಡಿದೆ.. ಮತ್ತೆ ಚಿನ್ನ ಹಾಗೂ ಬೆಳ್ಳಿಯ ದರ ಹೆಚ್ಚಾಗಿದೆ. ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ್ದಾರೆ.. ಈ ವೇಳೆ ಚಿನ್ನದ ಆಮದಿನ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಿದರು. ಈ ವಿಷಯ ಹೊರಬೀಳುತ್ತಲೇ, ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಆಗುತ್ತಾ ಎಂಬ ಅನುಮಾನ ಮೂಡುತ್ತಿದೆ. ಚಿನ್ನದ ಮೇಲೆ ಹೆಚ್ಚಿಗೆ ಟ್ಯಾಕ್ಸ್ ಹಾಕ್ತಿರುವ ಹಿನ್ನೆಲೆ ಚಿನ್ನದ ಬೆಲೆ 70,00ಸಾವಿರಕ್ಕೆ ಏರಿಕೆ ಆಗೋದು ನಿಶ್ಚಿತ ಆಗಿದೆ. ಹಾಗೇ ಬೆಳ್ಳಿಯ ಮೇಲಿನ ಆಮದು ಸುಂಕವು ಸ್ಥಳೀಯವಾಗಿ ತಯಾರಿಸಿದ ಆಭರಣಗಳ ಅಂತಿಮ ಬೆಲೆಯಲ್ಲಿ ಏರಿಕೆಗೆ ಆಗುವಾ ಸಾಧ್ಯತೆ ಇದೆ.
:2 ಪ್ರಸ್ತುತ ಚಿನ್ನದ ಬೆಲೆ 1 ಗ್ರಾಂಗೆ 6 ಸಾವಿರ ಹತ್ತಿರಕ್ಕೆ ಬಂದಿದೆ. ಸದ್ಯ ಅಕ್ಷಯ ತೃತೀಯ ಯುಗಾದಿ, ವಿವಾಹ ಶುಭಸಮಾರಂಭಗಳು ಹೆಚ್ಚಿಗೆ ಇರುವ ಹಿನ್ನೆಲೆ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಅಂತರಾಷ್ಟ್ರಿಯ ಮಟ್ಟದಲ್ಲಿ ಹಲವಾರು ವಿದ್ಯಮಾನಗಳ ನಡೆಯುತ್ತಿವೆ. ಇನ್ನೊದೆಡೆ ಆಭರಣಗಳನ್ನು ಕೊಂಡು ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ.. ಗುತ್ತಿದೆ.ಹೀಗೆ ಹಲವಾರು ಕಾರಣದಿಂದಾಗಿ ಚಿನ್ನದ ಬೆಲೆ ಏರಿಕೆ ಆಗ್ತಿದೆ. ಒಂದ್ಕಡೆ ಶುಭ ಸಮಾರಂಭಗಳು ಮತ್ತೊಂದ್ಕಡೆ ಚಿನ್ನದ ಬೆಲೆ ಏರಿಕೆ ಹೀಗೆ ಜನ್ರ ಜೇಬಿಗೆ ಕತ್ತರಿ ಬೀಳುತ್ತಿದೆ. ಇನ್ನು ಆಭರಣ ಪ್ರಿಯ ಹೇಂಗಳೆಯರಿಗೆ ತೀವ್ರ ನಿರಾಸೆ ಆಗಿದೆ.