Select Your Language

Notifications

webdunia
webdunia
webdunia
webdunia

ಹೆಂಡತಿ ಸೇರಿದಂತೆ 42ಮಹಿಳೆಯನ್ನು ಹತ್ಯೆ ಮಾಡಿದ್ದ ಸೀರಿಯಲ್ ಕಿಲ್ಲರ್ ಜೈಲಿನಿಂದ ಎಸ್ಕೇಪ್

ಹೆಂಡತಿ ಸೇರಿದಂತೆ 42ಮಹಿಳೆಯನ್ನು ಹತ್ಯೆ ಮಾಡಿದ್ದ ಸೀರಿಯಲ್ ಕಿಲ್ಲರ್ ಜೈಲಿನಿಂದ ಎಸ್ಕೇಪ್

Sampriya

ಕೀನ್ಯಾ , ಬುಧವಾರ, 21 ಆಗಸ್ಟ್ 2024 (15:16 IST)
Photo Courtesy X
ಕೀನ್ಯಾ: ತನ್ನ ಹೆಂಡತಿ ಸೇರಿದಂತೆ 42ಮಹಿಳೆಯರನ್ನು ಕೊಂದು ಕೀನ್ಯಾ ದೇಶವನ್ನಷ್ಟೇ ಅಲ್ಲದೇ ಇಡೀ ಆಫ್ರಿಕಾ ಖಂಡವನ್ನೇ ಬೆಚ್ಚಿ ಬೀಳಿಸಿದ್ದ ಸರಣಿ ಹಂತಕ  ಇದೀಗ ಜೈಲಿನಿಂದ ಎಸ್ಕೇಪ್ ಆಗಿದ್ದಾನೆ. ಈ ಆಘಾತಕಾರಿ ವಿಚಾರ ತಿಳಿದು ನೈರೋಬಿ ಮಹಿಳೆಯರು ಶಾಕ್ ಆಗಿದ್ದಾರೆ.

ಜುಲೈ 15 ರಂದು ಸರಣಿ ಹತ್ಯೆ ಪ್ರಕರಣ ಸಂಬಂಧ ಬಂಧಿಸಿದ ಹಂತಕ ಕಾಲಿನ್ಸ್ ಜುಮೈಸಿ ಖಲುಶಾ ಅವರು ವಿಚಾರಣೆ ವೇಳೆಯೇ ಸೆಲ್‌ನಿಂದ ಎಸ್ಕೇಪ್ ಆಗಿದ್ದಾನೆ.

ಕೈದಿಗಳಿಗೆ ಉಪಹಾರ ನೀಡಲು ಅಧಿಕಾರಿಗಳು ಬೆಳಿಗ್ಗೆ 5 ಗಂಟೆಗೆ ಹೋದಾಗ ಪರಾರಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ನೈರೋಬಿಯಾ ಕ್ವಾರಿಯೊಂದರಲ್ಲಿ ಕತ್ತರಿಸಿದ ಮಹಿಳೆಯರ 9 ಶವಗಳು ಪತ್ತೆಯಾಗಿದ್ದವು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಕಾಲಿನ್ಸ್ ಜುಮೈಸಿ ಖಲುಶಾನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತನ್ನ ಹೆಂಡತಿ ಸಹಿತಿ 42 ಮಹಿಳೆಯರನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ನನಗೊಂದು ನೀತಿ, ಕುಮಾರಸ್ವಾಮಿಗೆ ಒಂದು ನೀತಿ ರಾಜ್ಯಪಾಲರು ಮಾಡೋದು ಸರೀನಾ: ಸಿದ್ದರಾಮಯ್ಯ