Select Your Language

Notifications

webdunia
webdunia
webdunia
webdunia

ಶಂಕಿತ ಉಗ್ರರ ಬಗ್ಗೆಯ ವರದಿ ಕೇಂದ್ರ ಗೃಹ ಇಲಾಖೆಗೆ ರವಾನೆ

ಶಂಕಿತ ಉಗ್ರರ ಬಗ್ಗೆಯ ವರದಿ ಕೇಂದ್ರ ಗೃಹ ಇಲಾಖೆಗೆ ರವಾನೆ
bangalore , ಶನಿವಾರ, 22 ಜುಲೈ 2023 (19:30 IST)
ದಿನದಿಂದ ದಿನಕ್ಕೆ ಅನೇಕ ವಿಚಾರಗಳು ಶಂಕಿತರ ಉಗ್ರರ ಕೇಸ್ನಲ್ಲಿ ಸಿಗುತ್ತಿದೆ.ಶಂಕಿತ ಉಗ್ರರ ವಿಚಾರಣೆಯಲ್ಲಿ ಸ್ಪೋಟಕ ಅಂಶಗಳು ಹೊರ ಬರುತ್ತಿದ್ದು.. ಈ ವಿಚಾರಗಳು ಸ್ವತಃ ಪೊಲೀಸರೇ ಬೆಚ್ಚಿ ಬೀಳುವಂತಾಗುತ್ತಿದೆ.. ಈ ರೀತಿಯಾಗಿಯು ಈ
ಪಾತಕಿಗಳು  ಪ್ಲ್ಯಾನ್ ಮಾಡ್ತಾಯಿದ್ರ ಅಂತ ಪೊಲೀಸರು ಫುಲ್ ಶಾಕ್ ಆಗಿದ್ದಾರೆ.ಬೆಂಗಳೂರಿನಲ್ಲಿ ಸಿಕ್ಕ ಶಂಕಿತ ಉಗ್ರರ ಬಗ್ಗೆ ಸಿಸಿಬಿ ಪೊಲೀಸರು ಇದೀಗ ಕೇಂದ್ರ ಗೃಹ ಇಲಾಖೆಗೆ ವರದಿ ರವಾನೆ ಮಾಡಿದೆ.. ಬಂಧನವಾದ ಶಂಕಿತ ಉಗ್ರರ ಸಂಖ್ಯೆ, ಹೆಸರು, ಯಾವ ಸೆಕ್ಷನ್ ನಲ್ಲಿ ಕೇಸ್ ದಾಖಲು ಮಾಡಲಾಗಿದೆ ಎಂಬಾ ಸಂಪೂರ್ಣ ಮಾಹಿತಿಯನ್ನು ನೀಡಿದೆ.. ಶಂಕಿತರ ಮೇಲಿರುವ ಆರೋಪಗಳು ಹಾಗೂ ಸಂಚಿನ ಬಗ್ಗೆ ತನಿಖೆಯ ಪ್ರಾಥಮಿಕ ವರದಿಯನ್ನ ಕೇಂದ್ರ ಗೃಹ ಇಲಾಖೆಗೆ ಕಳುಹಿಸಿದ್ದಾರೆ.. ಶಂಕಿತ ಉಗ್ರರ ಫೋನ್ ಕರೆಗಳ ಬೆನ್ನು ಬಿದ್ದಿರುವ ಸಿಸಿಬಿ ಪೊಲೀಸರು ಶಂಕಿತರು ಈವರೆಗೆ ಯಾರ ಯಾರ ಜೊತೆ ಸಂಪರ್ಕ ಹೊಂದಿದ್ದರು,ಯಾರ ಯಾರ ಜೊತೆ ಮಾತನಾಡಿದ್ದಾರೆ ಎಂದು ತನಿಖೆ ಮುಂದುವರಿಸಿದ್ದಾರೆ.
 
ಯುಎಪಿಎ ಸೆಕ್ಷನ್ ಅಡಿಯಲ್ಲಿ ಎರಡು  ವರ್ಷಗಳ ಕರೆಗಳ ಮಾಹಿತಿ ಕಲೆ ಹಾಕಲು ಮುಂದಾಗಿರುವ ಸಿಸಿಬಿ,ಕಳೆದ ಎರಡು ವರ್ಷಗಳಿಂದ ಯಾರಿಗೆಲ್ಲಾ ಕರೆ ಮಾಡಿ ಮಾತನಾಡಿದ್ದಾರೆ ಎಂದು ತನಿಖೆ‌ ಚುರುಕಗೊಳಿಸಿದೆ.ಎರಡು ವರ್ಷಗಳ ಸಿಡಿಆರ್  ಪಡೆದು  ಪರಿಶೀಲನೆಗೆ ಮಾಡುತ್ತಿದ್ದಾರೆ..ಅಲ್ಲದೆ ಈಗಾಗಲೇ ಕೆಲವರು ಸಿಮ್ ಬದಲಿಸಿ ಹೊಸ ಸಿಮ್ ಗಳ ಖರೀದಿ ಮಾಡಿದ್ದಾರೆ ಎಂಬಾ ಮಾಹಿತಿಯು ಸಹ ಇದೆ.. ಹೊಸ ಸಿಮ್ ನಲ್ಲಿ ಯಾರಿಗೆಲ್ಲಾ ಕರೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗುತ್ತಿದೆ.ಬಗೆದಷ್ಟು ಹೊರ ಬರುತ್ತಿರುವ ವಿಚಾರಗಳನ್ನು ಕಂಡು ಪೊಲೀಸರೆ ಶಾಕ್‌ ಆಗುತ್ತಿದ್ದಾರೆ.. ಶಂಕಿತ ಉಗ್ರರ ಡಿಜಿಟಲ್ ಪೇಮೆಂಟ್ ಖಾತೆಗಳಿಗೆ ಹರಿದು ಬಂದಿರೊ ಹಣ, ಸಿಸಿಬಿ ಪೊಲೀಸರ ತನಿಖೆ ವೇಳೆ ಹಣ ಸಂದಾಯವಾಗಿರುವುದು ಬೆಳಕಿಗೆ ಬಂದಿದೆ..ಬಂಧಿತ ಐವರು ಶಂಕಿತರ ಬ್ಯಾಂಕ್ ವಿವರಗಳ ಪರಿಶೀಲನೆ ಮಾಡಲಾಗುತ್ತಿದೆ.ಈ ವೇಳೆ ಕೆಲವು ಬಾರಿ ಅಗತ್ಯ ಅನುಸಾರ ಹಣ ವರ್ಗಾವಣೆ ಆಗಿದ್ದು, ಯಾವ ಯಾವ ಕೆಲಸಕ್ಕೆ ಎಷ್ಟೆಷ್ಟು ಹಣ ಬೇಕಾಗುತ್ತೆ ಅಂತ ಪರಿಗಣಿಸಿ ಹಣ ಸಂದಾಯ‌ ಮಾಡಿದ್ದಾರೆ.ಶಂಕಿತರ ಖಾತೆಗೆ ಹರಿದು ಬಂದಿರುವುದು ಬೆರಳೆಣಿಕೆಯಷ್ಟು ಲಕ್ಷ ಮಾತ್ರ.ವಿದೇಶದಿಂದ ಹಣ ಸಂದಾಯ ಮಾಡಿರುವ ಪ್ರಮುಖ ಆರೋಪಿ ಜುನೈದ್,ಐವರು ಶಂಕಿತರಿಗೆ ಯಾವ ಸಮಯಕ್ಕೆ ಎಷ್ಟು ಬೇಕೊ ಅಷ್ಟು ಹಣ ಕಳಿಸಿದ್ದಾನೆ ಎನ್ನಲಾಗಿದೆ.

ಶಂಕಿತರ ಮೊಬೈಲ್ ನಲ್ಲಿ ಪತ್ತೆಯಾಗಿದೆ, ವಾಟ್ಸಪ್ ಚಾಟಿಂಗ್ ಮತ್ತು ಕರೆಗಳು ವಾಟ್ಸಪ್ ಮೂಲಕ ಹಲವರಿಗೆ ಕರೆ ಮಾಡಿದ್ದಾರೆ 
ಹಾಗೂ ಹಲವರ ಜೊತೆ ವಾಟ್ಸಪ್ ಚಾಟಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ.. ಈ ವಾಟ್ಸಪ್ ಚಾಟಿಂಗ್ ಮತ್ತು ಕರೆಗಳನ್ನ ಯಾರಿಗೆ ಮಾಡಿದ್ರು, ಯಾರ ಜೊತೆ ಮಾತಾಡಿದ್ದಾರೆ. ಯಾವ ಲೋಕೇಷನ್ ಗೆ ಕರೆಗಳು ಹೋಗಿವೆ ಎಂದು ತನಿಖೆ ಚುರುಕಾಗಿದೆ.. ಕೆಲವರ ಬಳಿ ಆಂಡ್ರ್ಯಾಯ್ಡ್ ಮೊಬೈಲ್ ಇದ್ರೆ ಇನ್ನೂ ಕೆಲವರ ಬಳಿ ಬೆಸಿಕ್ ಮೊಬೈಲ್ ಮಾತ್ರ ಇದೆ.
ಸದ್ಯ ಶಂಕಿತರ ಬಳಿಯಿದ್ದ 12 ಮೊಬೈಲ್ ಫೋನ್ ರಿಟ್ರೀವ್ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ‌ಸಾರಿಗೆ ಬಂದ್ ಘೋಷಣೆ ಹಿನ್ನೆಲೆ ಜುಲೈ 24 ರಂದು ಸಭೆ ಕರೆದ ಸಾರಿಗೆ ಇಲಾಖೆ