Publish Date: Fri, 10 Mar 2017 (14:48 IST)
Updated Date: Fri, 10 Mar 2017 (14:54 IST)
ಬೆಂಗಳೂರು(ಮಾ.10): ಬೆಂಗಳೂರು ಜನ ಬೆಚ್ಚಿಬೀಳುವಂಥಾ ಪ್ರಕರಣ ಬೆಳಕಿಗೆ ಬಂದಿದೆ. ಶಿವರಾಮರೆಡ್ಡಿ ಎಂಬಾತ ಇದುವರೆಗೆ 16 ಲೈಂಗಿಕ ಕಿರುಕುಳ ಪ್ರಕರಣಗಳನ್ನ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆದರೂ ಇಂದಿಗೂ ಆತನ ಬಂಧನವಾಗಿಲ್ಲ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.
ನಿತ್ಯವೂ ಒಂಟಿ ಹುಡುಗಿಯರನ್ನ ಟಾರ್ಗೆಟ್ ಮಾಡುತ್ತಿದ್ದ ಈತ ಲೈಂಗಿಕ ಕಿರುಕುಳ ನೀಡುತ್ತಿದ್ದ. 2014ರಲ್ಲಿ ಪ್ರಕರಣವೊಂದರಲ್ಲಿ ಈತನ ವಿರುದ್ಧ ಗೂಂಡಾಕಾಯ್ದೆ ಸಹ ಹಾಕಲಾಗಿತ್ತು. ಮಾರ್ಚ್ 2ರಂದು ಪಿಜಿಗೆ ನುಗ್ಗಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 5ನೇ ತಾರೀಖು ಈತನ ಮೇಲೆ ಪೊಲೀಸ್ ಫೈರಿಂಗ್ ಆಗಿತ್ತು. ಬಳಿಕ ಮಾರ್ಚ್ 6ರಂದೂ ಈತ ಮತ್ತೆ ಪಿಜಿಗೆ ನುಗ್ಗಿ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ಆದರೆ, ಈ ಬಗ್ಗೆ ದೂರು ನೀಡಲು ಸಂತ್ರಸ್ತೆ ತೆರಳಿದಾಗ ಪೊಲೀಸರು ದೂರು ದಾಖಲಿಸಿಕೊಳ್ಲಲು ಹಿಂದೇಟು ಹಾಕಿದ್ದಾರೆ ಎಂಬ ಅನುಮಾನ ಮೂಡತೊಡಗಿದೆ.