Publish Date: Wed, 21 Feb 2024 (14:05 IST)
Updated Date: Wed, 21 Feb 2024 (14:25 IST)
ಬೆಂಗಳೂರು-ನಗರದಲ್ಲಿ ಹೊಸದಾಗಿ ಕಾರು ಖರೀದಿಸಿದ್ದು ಆ ಕಾರನ್ನ ಪಾರ್ಕಿಂಗ್ ಮಾಡಲಾಗಿತ್ತು ಆದ್ರೆ ಪಾರ್ಕಿಂಗ್ ಮಾಡಿದ ಸ್ಥಳದಲ್ಲೇ ಕಾರು ಭಸ್ಮವಾಗಿದೆ.ನೋಡ ನೋಡ್ತಿದ್ದಂಗೆ ಲಕ್ಷಾಂತರ ಮೌಲ್ಯದ ಕಾರು ಹೊತ್ತಿಉರಿದಿದೆ.ಆಕಸ್ಮಿಕ ಅಗ್ನಿ ಅವಘಡದಿಂದ ಲಕ್ಷಾಂತರ ಬೆಲೆಬಾಳುವ ಕಾರು ಸುಟ್ಟುವಾಗಿರುವ ಘಟನೆ ನಗರದ ಕಾಡುಬಿಸನಹಳ್ಳಿಯಲ್ಲಿ ನಡೆದಿದೆ.
ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಾರಿನ ಬ್ಯಾನೆಟ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು,ಬೆಂಕಿಯನ್ನ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಅಗ್ನಿ ಅವಘಡದಿಂದ ಕಾರಿನಲ್ಲಿದ್ದ ದಾಖಲೆಗಳು ನಾಶವಾಗಿದ್ದು,ಸಂಪತ್ ಕುಮಾರ್ ಗೆ ಸೇರಿದ KA-01 NA-3474 ಗ್ರಾಂಡ್ ವಿಟರಾ ಮಾಡೆಲಿನ ಹೊಸ ಕಾರು ಖರೀದಿ ಮಾಡಿ ಕೆಲ ತಿಂಗಳಾಗಿತ್ತು,ಅಷ್ಟರಲ್ಲಿಯೇ ಅವಘಡ ಸಂಭವಿಸಿದೆ.