ಅಂಬುಲೆನ್ಸ್ನಲ್ಲೆ ತಾಯಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕೊಪ್ಪಳದ ಕಾರಟಗಿ ತಾಲೂಕಿನ ಹಿರೆಡಂಕನಕಲ್ ಗ್ರಾಮದ ನಾಗರತ್ನ ಎಂಬುವವಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ನೋವಿನಿಂದ 108ಗೆ ಕರೆ ಮಾಡಿ, ಆಸ್ಪತ್ರೆಗೆ ತೆರಳಿದ್ದ ಮಹಿಳೆಗೆ ಮಾರ್ಗ ಮಧ್ಯದಲ್ಲೇ ಮಗುವಾಗಿದೆ. ಇನ್ನು ಕಾರಟಗಿಯ ಅಂಬುಲೆನ್ಸ್ ಸ್ಟಾಪ್ ನರ್ಸ್ ರಾಕೇಶ್ ಹಿರೇಮಠ್ ಹಾಗೂ ಚಾಲಕ ರೆಹಮಾನ್ರವರಿಗೆ ಮಹಿಳೆಯ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ