Publish Date: Mon, 03 Jul 2023 (18:47 IST)
Updated Date: Mon, 03 Jul 2023 (19:24 IST)
ಮಾಜಿ ಸಿಎಂ H.D ಕುಮಾರಸ್ವಾಮಿ ಮೈ ಪರಚಿಕೊಳ್ಳುವ ಕೆಲಸ ಮಾಡಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಬಹಳ ಆತುರದಲ್ಲಿದ್ದಾರೆ. ಅವರು ಆಧಾರ ರಹಿತ ಅರೋಪ ಮಾಡ್ತಿದ್ದಾರೆ. ಸೂಕ್ತ ದಾಖಲೆಗಳಿದ್ರೆ ಮಾತ್ರ ಅರೋಪ ಮಾಡಬೇಕು ಎಂದರು. ನಮ್ಮ ಸರ್ಕಾರ ಜನ ಪರ ಕೆಲಸ ಮಾಡುತ್ತೆ. ನಾವು ಜನರಿಗೆ ಒಳ್ಳೆಯ ಅಡಳಿತ ಕೊಡ್ತೀವಿ ಎಂದು ತಿರುಗೇಟು ನೀಡಿದ್ರು. ಇದೇ ವೇಳೆ ಆರೋಗ್ಯ ಇಲಾಖೆಯಲ್ಲಿ ನಡೆದಿರೋ ಭ್ರಷ್ಟಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಆದಷ್ಟೂ ಬೇಗ ಈ ಬಗ್ಗೆ ಸಿಎಂ ಜೊತೆ ಮಾತನಾಡ್ತೀವಿ. ಯಾವ ರೀತಿ ತನಿಖೆ ಮಾಡಬೇಕು ಎಂಬುದನ್ನ ಚರ್ಚಿಸುತ್ತೇವೆ ಎಂದ್ರು.