ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

Webdunia
ಮಂಗಳವಾರ, 28 ಜೂನ್ 2022 (19:38 IST)
ಮುದ್ದು ಮುದ್ದಾದ ಮಕ್ಕಳು, ಮತ್ತೊಂದು ಕಡೆ ತಾನು ಹೆತ್ತು ಸಾಕಿ ಸಲಹಿದ ಮಕ್ಕಳ ಜೊತೆಯಲ್ಲಿ ಶವವಾಗಿ ಮಲಗಿರೊ ತಾಯಿ. ಈ ದೃಶ್ಯ ನೋಡಿದ್ರೆ ಎಂಥವರ ಕರುಳು ಕೂಡ ಕಿತ್ತು ಬರದೆ ಇರಲಾರದು. ಅಂದಹಾಗೆ ಈ ಹೃದಯ ವಿದ್ರಾವಕ ಘಟನೆಗೆ ಸಾಕ್ಷಿ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ರಾಮೇಗೌಡನಪುರ. 
ಅಂದಹಾಗೆ ಇಲ್ಲಿ ಸಾವನ್ನಪ್ಪಿದ ಗೃಹಿಣಿ ಹೆಸರು ಸರೋಜಾ (32) 6 ವರ್ಷದ ಗೀತಾ, 4 ವರ್ಷದ ಕುಸುಮ ಮೃತ ಮಕ್ಕಳು. ಈ ಸರೋಜಾ ಪತಿ ನಿಂಗರಾಜು ಹೊಂದಿದ್ದ ಅನೈತಿಕ ಸಂಬಂಧವೇ ಈ ಮೂವರ ಸಾವಿಗೆ ಚೆನ್ನಾಗಿದೆ.
ಸರೋಜಳನ್ನ ತಿ. ನರಸೀಪುರ ತಾಲೂಕಿನ ಮಾವಿನಹಳ್ಳಿ ಗ್ರಾಮದ ನಿಂಗರಾಜುವಿಗೆ ಮದುವೆ ಮಾಡಿಸಲಾಗಿದೆ. ಇಬ್ಬರ ದಾಂಪತ್ಯಕ್ಕೆ ಮುದ್ದಾದ ಇಬ್ಬರು ಮಕ್ಕಳು ಕೂಡ ಇದ್ರು. ಅದ್ರೆ ಪತಿ ನಿಂಗರಾಜು ಮೃತ ಸರೋಜ ಳ ಅಣ್ಣನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದನಂತೆ. ಈ ವಿಚಾರದಲ್ಲಿ ಪತಿ ಪತ್ನಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. 
ಕೆಲ ದಿನಗಳ ಹಿಂದಷ್ಟೇ ಪತಿ ಮನೆ ಬಿಟ್ಟ ಸರೋಜ ತವರು ಮನೆ ರಾಮೇಗೌಡನಪುರಕ್ಕೆ ಬಂದಿದ್ಲು. ನಿನ್ನೆ ಡೆತ್ ನೋಟ್ ಬರೆದಿದ್ದ ಸರೋಜ, ಪತಿ ನಿಂಗರಾಜುವಿನಿಂದ ತನ್ನ ಅಣ್ಣನ ಕುಟುಂಬ ಹಾಳಾಗಿದೆ. ನನ್ನ ಅಣ್ಣನ ಮಕ್ಕಳ ಮುಖ ನೋಡಿದ್ರೆ ತುಂಬಾ ನೋವಾಗುತ್ತೆ. ನಾನು ಸತ್ತ ಬಳಿಕ ನನ್ನ ಮುಖವನ್ನ ನನ್ನ ಗಂಡನಿಗೆ ತೋರಿಸಬೇಡಿ ಎಂದು ಉಲ್ಲೇಖ ಮಾಡಿ ತನ್ನಿಬ್ಬರು ಮಕ್ಕಳನ್ನ ನೇಣಿಗೆ ಹಾಕಿ, ತಾನೂ ನೇಣಿಗೆ ಶರಣಾಗಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಸಾಲುಮರದ ತಿಮ್ಮಕ್ಕನ ಕೊನೆಯ ಆಸೆ ಈಡೇರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments