ಪ್ರೇಯಸಿಯ ಕತ್ತು ಕುಯ್ದು ಆತ್ಮಹತ್ಯೆಗೆ ಶರಣಾದ ಪ್ರೇಮಿ?

Webdunia
ಶುಕ್ರವಾರ, 12 ಮೇ 2023 (15:45 IST)
ತುಮಕೂರು : ಪ್ರೀತಿಯಲ್ಲಿ ಬಿರುಕು ಉಂಟಾದ ಹಿನ್ನೆಲೆ ಪ್ರೇಯಸಿಯ ಕತ್ತು ಕುಯ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಯಳನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಭಟ್ಟರಹಳ್ಳಿಯ ಸಿದ್ದರಾಮಯ್ಯ ಅವರ ಪುತ್ರ ಬಿ.ಎಸ್.ವಿನಯಕುಮಾರ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಅದೇ ಗ್ರಾಮದ ದಿ.ಕಲ್ಲೆಗೌಡರ ಪುತ್ರಿ ಕೆ.ಜೀವಿತಾ (17) ಎಂಬಾಕೆಯನ್ನು ಪ್ರೀತಿಸುತ್ತಿದ್ದ.

ಜೀವಿತಾ ದೊಡ್ಡಬಿದರೆ ಗ್ರಾಮದವಳಾಗಿದ್ದು, ತಾಯಿಯ ಜೊತೆ ಭಟ್ಟರಹಳ್ಳಿಯ ಅಜ್ಜಿ ಮನೆಯಲ್ಲಿ ವಾಸವಿದ್ದಳು. ಈಕೆ ತುಮಕೂರಿನ ಕಾಲೇಜು ಒಂದರಲ್ಲಿ ಓದುತ್ತಿದ್ದು, ಈ ವರ್ಷ ದ್ವಿತೀಯ ಪಿಯುಸಿ ಉತ್ತೀರ್ಣಳಾಗಿದ್ದಳು.

ವಿನಯಕುಮಾರ್ ಗ್ರಾಮದ ಸಿದ್ದರಾಮೇಶ್ವರ ದೇಗುಲದ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಕೆಲ ದಿನಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚಿಗೆ ಇಬ್ಬರ ನಡುವೆ ಬಿರುಕು ಉಂಟಾಗಿತ್ತು. ಇದರಿಂದ ಕೋಪಗೊಂಡಿದ್ದ ವಿನಯಕುಮಾರ್ ಗುರುವಾರ ಮಂಜಾನೆ 5:30ರ ವೇಳೆಗೆ ಯುವತಿಯ ಮನೆಗೆ ತೆರಳಿ ಮಚ್ಚಿನಿಂದ ಆಕೆಯ ಕುತ್ತಿಗೆಗೆ ಬಲವಾಗಿ ಬೀಸಿದ್ದಾನೆ. ಮಾರಣಾಂತಿಕವಾಗಿ ಗಾಯಗೊಂಡಿರುವ ಆಕೆ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 

ಹಲ್ಲೆ ನಡೆಸಿದ ಬಳಿಕ ವಿನಯಕುಮಾರ್ ಕಣ್ಮರೆಯಾಗಿದ್ದ. ನಾಪತ್ತೆಯಾದ ಆತನಿಗಾಗಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಗ್ರಾಮದ ಕಲ್ಯಾಣಿ ಬಳಿ ಆತನ ಟೀ ಶರ್ಟ್ ಪತ್ತೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌ನಲ್ಲಿ ರಕ್ತದೋಕುಳಿ: ಎನ್‌ಕೌಂಟರ್‌ ವೇಳೆ 11 ಯೋಧರು ಸೇರಿ 30 ಮಂದಿ ಸಾವು

ಕಮಲದ ವಿನ್ಯಾಸದಲ್ಲಿ ತಯಾರಾದ ಮುಂಬೈನ ಹೊಸ ವಿಮಾನ ನಿಲ್ದಾಣ ಉದ್ಘಾಟಿಸಿದ ಮೋದಿ

134 ದಿನಗಳ ಹೋರಾಡಿಯೂ ಮಗಳ ಬಿಟ್ಟು ಹೊರಟೇ ಹೋದ ಅಪೂರ್ವ: ಮನಕಲಕುವ ಘಟನೆ

ಬಿಗ್‌ಬಾಸ್‌ ಮನೆಗೆ ಬೀಗ ಹಾಕಿದ ಹಾಗೇ, ಪಿಕ್‌ಪಾಕೆಟ್ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಯಾವಾಗ ಬೀಗ ಹಾಕುತ್ತೀರಾ

ಅಧಿಕೃತ ಸಂವಹನಕ್ಕಾಗಿ zohoಮೇಲ್‌ಗೆ ಬದಲಾಯಿಸಿಕೊಂಡ ಅಮಿತ್‌ ಶಾ

ಮುಂದಿನ ಸುದ್ದಿ
Show comments