Publish Date: Sat, 05 Aug 2023 (21:00 IST)
Updated Date: Sat, 05 Aug 2023 (21:25 IST)
ಸ್ಕೂಟಿ ಮೇಲೆ ಬರುತ್ತಿದ್ದ ಸವಾರನ ಮೇಲೆ ಡಿಸೇಲ್ ಟ್ಯಾಂಕರ್ ಹರಿದ ಘಟನೆ, ಯಾದಗಿರಿ ನಗರದ ಗ್ರೀನ್ ಸಿಟಿ ಮುಂಭಾಗದಲ್ಲಿ ನಡೆದಿದೆ. ಲಾರಿ ಗುದ್ದಿದ್ದ ರಭಸಕ್ಕೆ ಸ್ಕೂಟಿ ಪುಡಿ ಪುಡಿಯಾಗಿದ್ದು, ಶರಣಪ್ಪ ಎನ್ನುವ ಸವಾರನ ಸ್ಥಿತಿ ಗಂಭೀರವಾಗಿದೆ. ಶರಣಪ್ಪರನ್ನ ಸ್ಥಳೀಯರೇ ಆಸ್ಪತ್ರೆಗೆ ಸೇರಿಸಿದ್ದು, ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.