Publish Date: Mon, 29 Aug 2022 (16:07 IST)
Updated Date: Mon, 29 Aug 2022 (16:11 IST)
ನಗರ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆಗಳು ಸೆರೆಯಾಗಿವೆ. ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 3 ವರ್ಷದ 1 ಚಿರತೆ ಬಿದ್ದಿದ್ದು, ಕೊಪ್ಪಳದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಎರಡು ದಿನಗಳಿಂದ ನಗರದ ಪ್ರದೇಶದ ಗುಡ್ಡದಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿದ್ದವು. ಚಿರತೆ ಕಂಡು ಜನ ಭಯಭೀತರಾಗಿದ್ದರು. ಸದ್ಯ ಇನ್ನೊಂದು ಚಿರತೆಯನ್ನು ಸೆರೆ ಹಿಡಿಯುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ.