Webdunia - Bharat's app for daily news and videos

Install App

ಪತ್ನಿಯ ಅನೈತಿಕ ಸಂಬಂಧಕ್ಕೆ ರಾಕ್ಷಸನಾಗಿದ್ದ ಗಂಡ

Webdunia
ಗುರುವಾರ, 2 ಫೆಬ್ರವರಿ 2023 (15:52 IST)
ಬೆಳಗ್ಗೆ 10.30 ರ ಸಮಯ.ಹೊಯ್ಸಳ ಪೊಲೀಸರಿಗೆ ಒಂದು ಫೋನ್ ಕಾಲ್ ಬರುತ್ತೆ.ನಮ್ಮ ಮನೆಯಲ್ಲಿ ಗಂಡ ಹೆಂಡತಿ ಜಗಳ ಆಗ್ತಿದೆ ಅಂತಾ ಆತ ಹೇಳಿದ್ದ.ಸ್ಥಳಕ್ಕೆ ಬಂದು ನೋಡಿದಾಗ ಪೊಲೀಸರೇ ದಂಗಾಗಿ ಹೋಗಿದ್ರು.ಯಾಕಂದ್ರೆ ಮನೆಯಲ್ಲಿ ರಕ್ತದ ಕೋಡಿಯೇ ಹರಿದಿತ್ತು.ಮದ್ಯದಲ್ಲಿ ಮಹಿಳೆ ಶವವಾಗಿ ಬಿದ್ದಿದ್ಳು.18 ವರ್ಷದ ದಾಂಪತ್ಯ ಜೀವನ ಕೊಲೆಯಲ್ಲಿ ಅಂತ್ಯವಾಗಿತ್ತು.ರಕ್ತದ ಕೋಡಿಯೇ ಹರಿದಿದೆ.ಎಫ್ಎಸ್ಎಲ್ ತಂಡವೆ ಬಂದಿದೆ.ಇಂಚಿಂಚು ಶೋಧ ನಡೆಸಲಾಗ್ತಿದೆ.ರಾಮಮೂರ್ತಿನಗರ ಹೊಯ್ಸಳ ಬೀದಿಯಲ್ಲಿ ಘನಘೋರವೇ ನಡೆದು ಹೋಗಿದೆ.
ಬೆಳಗ್ಗೆ 10.30 ಕ್ಕೆ ಹೊಯ್ಸಳ ಬೀದಿಯಿಂದ ಮೋರಿಸ್ ಎಂಬಾತ ಹೊಯ್ಸಳಗೆ ಕರೆ ಮಾಡಿದ್ದ.ನಮ್ಮ ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳ ಆಗ್ತಿದೆ ಎಂದಿದ್ದ.ಪತಿ ಪತ್ನಿ ಗಲಾಟೆ ಅಲ್ವಾ ಬುದ್ಧಿ ಹೇಳಿ ಬರೋಣ ಅಂತಲೇ ಪೊಲೀಸರು ಬಂದಿದ್ರು.ಆದ್ರೆ ಮನೆ ಬಳಿ ಬಂದಾಗ ಘನಘೋರವೇ ಕಂಡಿದೆ.44 ವರ್ಷದ ಮಹಿಳೆ ಲಿದಿಯಾ ರಕ್ತದ ಮಡುವಲ್ಲಿ ಬಿದ್ದಿದ್ದಳು.ಆಕೆಯನ್ನ 46 ವರ್ಷದ ಪತಿ ಮೋರಿಸನೇ ಡಂಬಲ್ಸ್ ನಿಂದ ಹತ್ತಾರು ಬಾರಿ ಹೊಡೆದು ಬರ್ಬರವಾಗಿ ಕೊಂದು ಮುಗಿಸಿದ್ದ.18 ವರ್ಷದ ಹಿಂದೆ ವಿವಾಹವಾಗಿದ್ದ ಮೋರಿಸ್ ಮತ್ತು ಲಿದಿಯಾಗೆ ಮೂವರು ಮಕ್ಕಳಿದ್ದಾರೆ.ರಾಮಮೂರ್ತಿನಗರದ ಹೊಯ್ಸಳ ಬೀದಿಯಲ್ಲಿನ ಮನೆಯ ಎರಡನೇ ಮಹಡಿಯಲ್ಲಿ ವಾಸವಿದ್ರು.ಹೀಗಿರುವಾಗ ಪತ್ನಿಯ ಶೀಲ‌ ಶಂಕಿಸಿದ್ದ ಆರೋಪಿ ಆಗಾಗ ಗಲಾಟೆ ಮಾಡ್ತಿದ್ದ.ಅದೇ ರೀತಿ ಬೆಳಗ್ಗೆ ಮೂವರು ಮಕ್ಕಳು ಶಾಲೆಗೆ ಹೋದ ಬಳಿಕ ಮನೆಯಲ್ಲಿ ಅದೇ ವಿಚಾರಕ್ಕೆ ಗಲಾಟೆಯಾಗಿದೆ.ಬೆಳಗ್ಗೆ 9.30 ಕ್ಕೆ ಗಲಾಟೆ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಎರಡೂವರೆ ಕೆಜಿಯ ಡಂಬಲ್ಸ್ ನಿಂದ ಹೊಡೆದು ಕೊಂದೇಬಿಟ್ಟಿದ್ದ.ನಂತರ ತಾನೇ ಪೊಲೀಸರಿಗೆ ಕರೆ ಮಾಡಿ ಗಲಾಟೆ ಆಗಿದೆ ಅಂತಾ ವಿಷಯ ತಿಳಿಸಿದ್ದ.ಸದ್ಯ ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು..ಆರೋಪಿ ಮೋರಿಸ್ ನನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.ವಿಚಾರಣೆ ಬಳಿಕವಷ್ಟೇ ಕೊಲೆಗೆ ಅಕ್ರಮ ಸಂಬಂಧ ಶಂಕೆಯೇ ಕಾರಣನಾ ಅಥವಾ ಬೇರೆ ಏನಾದರೂ ಕಾರಣ ಇದೆಯಾ ಅನ್ನೋದು ಗೊತ್ತಾಗಬೇಕಿದೆ
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಳೆ ಭಾರತಕ್ಕೆ ಶುಭಾಂಶು ಶುಕ್ಲಾ, ಸೋಮವಾರ ಪ್ರಧಾನಿ ಮೋದಿ ಭೇಟಿ ಸಾಧ್ಯತೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸಿಎಂ ಸಿದ್ದರಾಮಯ್ಯಗೆ ಆರ್ ಎಸ್ಎಸ್ ಬಗ್ಗೆ ವಿವರವಾಗಿ ಹೇಳಿದ ಬಿವೈ ವಿಜಯೇಂದ್ರ

ಧರ್ಮಸ್ಥಳ ಚಲೋಗೆ ಚಾಲನೆ ನೀಡಿದ ಬಿಜೆಪಿ

ಡಾ ಸಿಎನ್ ಮಂಜುನಾಥ್ ಪ್ರಕಾರ ಹೆಣ್ಣುಮಕ್ಕಳಲ್ಲೂ ಹೃದಯಾಘಾತ ಹೆಚ್ಚಲು ಇದೇ ಕಾರಣ

ಮುಂದಿನ ಸುದ್ದಿ
Show comments