Select Your Language

Notifications

webdunia
webdunia
webdunia
webdunia

ಲೋಕಸಭೆ ಟಿಕೆಟ್ ಗಿಟ್ಟಿಸಿಕೊಳ್ಳಲು ನಡೆಯುತ್ತಿದೆ ಭಾರೀ ಕಸರತ್ತು..!

Lok Sabha
bangalore , ಮಂಗಳವಾರ, 12 ಡಿಸೆಂಬರ್ 2023 (19:24 IST)
ಯೆಸ್.. ಲೋಕಸಭಾ ಸನಿಹವಾಗ್ತಾ ಇದೇ ಅನ್ನೊದೇ ಇದೀಗ ಮೂರು ಪಕ್ಷಗಳಲ್ಲಿ ಇನ್ನಿಲ್ಲದ ತಳಮಳ ಶುರುವಾಗಿ ಬಿಟ್ಟಿದೆ.. ತಮ್ಮ ಆಪ್ತರಿಗೆ, ಮನೆಯವರಿಗೆ ಶತಾಯಗತಾಯ ಲೋಕ ಟಿಕೆಟ್ ಕೊಡಿಸಲೇಬೇಕೆಂಬ ಗಟ್ಟಿ ಚಿಂತನೆಯಲ್ಲಿದ್ದಾರೆ ನಾಯಕರುಗಳು...!
 
ಹೈಕಮಾಂಡ್ ನಾಯಕರ ಬಾಗಿಲು ಬಡಿಯೋದಕ್ಕೆ ಕೈ ನಾಯಕರು ಸಿದ್ಧರಾಗಿ ಬಿಟ್ಟಿದ್ದಾರೆ. ತಮ್ಮವರಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಸರ್ಕಸ್ ನಡೆಸುತ್ತಿದ್ದಾರೆ. ಹಾಗೇನೆ ಮತ್ತೊಂದು ಕಡೆ ಬಿಜೆಪಿಯಲ್ಲಿಯೂ ಕೂಡ ಟಿಕೆಟ್ ಫೈಟ್ ಜೋರಾಗಿಯೇ ನಡೆದಿದೆ..
 
೨೦೨೪ರ ಲೋಕ ಸಮರ ಬಹುತೇಕ ಹತ್ತಿರ ಬರುತ್ತಿದೆ. ಈ ಹೊತ್ತಲ್ಲೇ ಮೂರು ಪಕ್ಷದ ನಾಯಕರು ಈಗಿನಿಂದಲೇ ತಮ್ಮ ಫ್ಯಾಮೀಲಿ ಮಂದಿಗೆ ಟಿಕೆಟ್ ಕೊಡಿಸಲು ತಯಾರಿ ನಡೆಸಿದ್ದಾರೆ.. ಹೇಗಾದರೂ ಮಾಡಿ, ಮಕ್ಕಳು, ಹೆಂಡತಿಯರನ್ನು ಚುನಾವಣಾ ಅಖಾಡಕ್ಕೆ ಇಳಿಸಲು ಭರ್ಜರಿ ತಾಲೀಮು ನಡೆಸಿದ್ದಾರೆ.
 
ಈ ಬಾರಿ ಮೂರು ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಜೋರಾಗಿ ನಡೆಯುತ್ತಿರುವಂತೆ ಕಾಣುತ್ತಿದೆ. ಡೆಲ್ಲಿ ಎಲೆಕ್ಷನ್ ೨೦೨೪ರ ಏಪ್ರಿಲ್ ಅಥವಾ ಮೇನಲ್ಲಿ ನಡೆಯುವ ಸಾಧ್ಯತೆ ಇರೋದ್ರಿಂದ ಮೂರು ಪಕ್ಷಗಳ ಫ್ಯಾಮಿಲಿ ಟಿಕೆಟ್ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ