Select Your Language

Notifications

webdunia
webdunia
webdunia
webdunia

ಮದುವೆಯಲ್ಲಿ ʼಸ್ಮೋಕಿ ಪಾನ್‌ʼ ಸೇವಿಸಿದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರ

Smooky Paan

sampriya

ಬೆಂಗಳೂರು , ಬುಧವಾರ, 22 ಮೇ 2024 (14:22 IST)
Photo Credit Facebook
ಬೆಂಗಳೂರು: ‘ಸ್ಮೋಕಿ ಪಾನ್’ತಿಂದು 12 ವರ್ಷದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರ ಆಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ

ಮದುವೆ ಸಮಾರಂಭದಲ್ಲಿ ಸ್ಮೋಕಿ ಸೇವನೆ ಮಾಡಿದ ನಂತರ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಬಾಲಕಿಯನ್ನು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಅಪಾಯಕಾರಿಯಲ್ಲದ ದ್ರವ ಸಾರಜನಕ ಹಾಕಲಾಗಿದ್ದ ‘ಸ್ಮೋಕಿ ಪಾನ್’ ಅನ್ನು ಬಾಲಕಿ ಸೇವಿಸಿರಬಹುದು ಎಂದು ಹೇಳಲಾಗಿದೆ.

ವೈದ್ಯಕೀಯ ಪರೀಕ್ಷೆಯಲ್ಲಿ ಮಗುವಿನ ಹೊಟ್ಟೆಯಲ್ಲಿ ರಂಧ್ರವಿರುವುದು ಕಂಡುಬಂದಿತು. ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಅದರಂತೆ, ಶಸ್ತ್ರಚಿಕಿತ್ಸೆ ನಡೆಸಿ ಹೆಚ್ಚಿನ ಅಪಾಯ ಆಗದಂತೆ ತಡೆದಿದ್ದೇವೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಶಸ್ತ್ರಚಿಕಿತ್ಸೆ ನಂತರ ಬಾಲಕಿಗೆ ಎರಡು ವಾರ ಐಸಿಯೂನಲ್ಲಿ ಚಿಕಿತ್ಸೆ ನೀಡಿ, 6 ದಿನಗಳ ನಂತರ ಆಕೆಯನ್ನು ಹಾಸ್ಪಿಟಲ್‌ನಿಂದ ಡಿಸ್ಚಾರ್ಜ್‌ ಮಾಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್ಚು ಮಳೆ ಬಂದು ತಮಿಳುನಾಡಿಗೆ ನೀರು ಹರಿಯಲಿ: ಡಿಕೆ ಶಿವಕುಮಾರ್ ವಿವಾದಿತ ಹೇಳಿಕೆ