Publish Date: Thu, 13 Oct 2022 (18:44 IST)
Updated Date: Thu, 13 Oct 2022 (18:48 IST)
ಕೋಲ್ಕತ್ತಾದ ಕುದ್ಘಾಟ್ ಜಿಲ್ಲೆಯಲ್ಲಿರುವ ಎಸ್ಕಿ ಮೂವಿ ಸ್ಟುಡಿಯೋದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದ ಹತ್ತು ಘಟಕಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದವು. ರಾಜ್ಯ ರಾಜಧಾನಿಯ ದಕ್ಷಿಣ ಭಾಗದಲ್ಲಿರುವ ಬಾಬುರಾಮ್ ಘೋಷ್ ರಸ್ತೆಯಲ್ಲಿರುವ ಸ್ಟುಡಿಯೋದಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿತು. ಸತತ ಕಾರ್ಯಾಚರಣೆ ಮೂಲಕ ಕುದ್ಘಾಟ್ ಪ್ರದೇಶದಲ್ಲಿ ಎಸ್ಕೇ ಮೂವೀಸ್ ಸ್ಟುಡಿಯೋದಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅವಘಡದಿಂದ ಸ್ಟುಡಿಯೋದಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.