Select Your Language

Notifications

webdunia
webdunia
webdunia
webdunia

ಬಸ್ಸಿನಡಿ ಸಿಲುಕಿ ಮೂವರು ಸಾವು

Three people died after falling under the bus
ಬಿಹಾರ , ಗುರುವಾರ, 13 ಅಕ್ಟೋಬರ್ 2022 (15:59 IST)
ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬೈಕ್​ಗೆ ಪೊಲೀಸ್ ಬಸ್​ವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ಬಿಹಾರದಲ್ಲಿ ಸಂಭವಿಸಿದೆ. ಅಪಘಾತದ ನಂತರ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಬಸ್‌ಗೂ ಬೆಂಕಿ ಆವರಿಸಿದೆ. ಈ ನಂತರ ಬಸ್ಸಿನ ಇಂಧನ ಟ್ಯಾಂಕ್ ಸ್ಫೋಟಗೊಂಡಿದೆ. ಮತ್ತೊಂದೆಡೆ ಬೈಕ್ ಸವಾರ ಹಾಗೂ ಇಬ್ಬರು ಸಹಚರರು ಬಸ್‌ಗೆ ಸಿಲುಕಿ ಸಜೀವ ದಹನವಾಗಿದ್ದಾರೆ. ಇವರ ವಿಡಿಯೋ ವೈರಲ್ ಆಗಿದೆ. ಬೈಕ್ ಜೊತೆ ಮೂವರು ಬಸ್ಸಿನಡಿ ಸಿಲುಕಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಬೆಂಕಿ ಹೊತ್ತಿದ ಬಳಿಕ ಬಸ್​ನಲ್ಲಿದ್ದ ಪೊಲೀಸರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹರಸಾಹಸಪಟ್ಟರು. ಈ ವಿಡಿಯೋ ವೈರಲ್​ ಆಗಿದೆ. ಬಸ್ ಚಾಲಕ ಉದ್ದೇಶಪೂರ್ವಕವಾಗಿ ರಾಂಗ್ ಸೈಡ್​ನಿಂದ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಮೂವರೂ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಬೈಕ್ ಅನ್ನು ಸುಮಾರು 500 ಮೀಟರ್ ವರೆಗೆ ಎಳೆದೊಯ್ದಿದ್ದಾರೆ. ಬೈಕ್ ಬಸ್ಸಿನಲ್ಲಿ ಸಿಲುಕಿಕೊಂಡಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಸಮವಸ್ತ್ರ ಪಾಲನೆ ಮಾಡಬೇಕು’