ಬೆಂಗಳೂರು-ಪಾದಚಾರಿ ಮೇಲೆ ಶ್ರೀರಾಮನ ಕಟೌಟ್ ಬಿದ್ದಿರುವ ಘಟನೆ ಎಚ್ಎಎಲ್ ಏರ್ಪೋರ್ಟ್ ರೋಡ್ ನಲ್ಲಿ ನಡೆದಿದೆ.ಹೆಚ್ ಎಎಲ್ ವಿಮಾನ ನಿಲ್ದಾಣದ ಪಕ್ಕದಲ್ಲೆ ಶ್ರೀರಾಮನ ಬೃಹತ್ ಕಟೌಟ್ ಹಾಕಲಾಗಿತ್ತು.ಶ್ರೀರಾಮ ಮಂದಿರ ಉದ್ಘಾಟನೆ ದಿನದಂದು ಕಟೌಟ್ ಹಾಕಲಾಗಿದ್ದು,ಕಾರ್ಯಕ್ರಮ ಮುಗಿದು ೧೦ ದಿನಗಳಾದ್ರು ಕಟೌಟ್ ತೆರವುಗೊಳಿಸದ ಹಿನ್ನೆಲೆ ಅವಘಡವಾಗಿದೆ. ಪಾದಚಾರಿ ಮಾರ್ಗದಲ್ಲಿ ಸಾಗುತ್ತಿದ್ದವರ ಮೇಲೆ ಕಟೌಟ್ ಬಿದ್ದಿದೆ.ಮೂರು ಜನ ಪಾದಚಾರಿಗಳು ಗಂಭೀರ ಗಾಯಗೊಂಡಿದ್ದಾರೆ.ಮೂರು ಜನರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.