Webdunia - Bharat's app for daily news and videos

Install App

ತಾಯಿಯನ್ನು ‘ಹೆದರಿಸುವ’ ಮುದ್ದು ಪುಟಾಣಿ

Webdunia
ಭಾನುವಾರ, 10 ಜುಲೈ 2022 (20:32 IST)
ಮರೆಯಲ್ಲಿ ನಿಂತು ತಮ್ಮ ಪ್ರೀತಿಪಾತ್ರರಿಗೆ ಹೆದರಿಸುವುದು ಯಾರಿಗೂ ಹೊಸದೇನೂ ಅಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ಸಲವಾದರೂ ಈ ರೀತಿ ಇಷ್ಟಪಾತ್ರರನ್ನು ಕಾಡಿರುತ್ತಾರೆ. ಒಮ್ಮೊಮ್ಮೆ ಮಕ್ಕಳನ್ನೂ ಕೆಲವರು ಈ ರೀತಿಯಾಗಿ ಹೆದರಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ಇಲ್ಲಿ ಮಗುವೇ ತನ್ನ ತಾಯಿಯನ್ನು ಮುದ್ದಾಗಿ ಹೆದರಿಸುತ್ತದೆ. ಈ ಕ್ಷಣವೇ ಸುಂದರ. ನೋಡಿದಷ್ಟು ಖುಷಿ ನೀಡುವ ಅದ್ಭುತ ದೃಶ್ಯವಿದು. ಮಹಿಳೆಯೊಬ್ಬರು ಕುಳಿತಿರುವ ಮತ್ತು ಹಿಂಬದಿಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬರುತ್ತಿರುವ ಕಂದನ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಅಮ್ಮನ ಹಿಂದಿನಿಂದ ಬರುವ ಪುಟಾಣಿ ತನ್ನ ಕೈಯಲ್ಲಿ ಡೈನೋಸಾರ್ ತಲೆಯನ್ನು ಹಿಡಿದುಕೊಂಡು ತಾಯಿಯನ್ನು ಹೆದರಿಸುವ ಪ್ರಯತ್ನ ಮಾಡುತ್ತಾನೆ. ಅಮ್ಮ ಕೂಡಾ ಕಂದನ ಖುಷಿಗಾಗಿ ಹೆದರಿದಂತೆ ನಟಿಸುವುದು ಕೂಡಾ ಇಲ್ಲಿ ಕಾಣುತ್ತದೆ. ಹೀಗೆ ಅಮ್ಮ ಹೆದರಿದ್ದನ್ನು ಕಂಡ ಈ ಪುಟಾಣಿಯ ಖುಷಿಗೆ ಪಾರವೇ ಇರಲಿಲ್ಲ. ಅದರಲ್ಲೂ ಕೊನೆಗೆ ಡೈನೋಸಾರ್ ತಲೆಯನ್ನು ತೆಗೆದು ತನ್ನ ಕೈಯನ್ನು ಅಮ್ಮನಿಗೆ ತೋರಿಸುವ ಕಂದನ ಆ ಮುಗ್ಧತೆಯೇ ಈ ಅಪೂರ್ವ ದೃಶ್ಯದ ಪ್ರಮುಖ ಹೈಲೈಟ್ಸ್‌. ನೋಡಿದಷ್ಟು ಹಿತ ನೀಡುವ ಅದ್ಭುತ ದೃಶ್ಯವಿದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಬ್ಯಾಂಕ್ ನಲ್ಲಿ ಹಣ ಇಡೋದು ಸೇಫಾ: ಗ್ರಾಹಕರಿಗೆ ಆತಂಕವಾಗಿರೋದು ಯಾಕೆ

Arecanut price: ಅಡಿಕೆಗೆ ವಾರದ ಆರಂಭದಲ್ಲೇ ಇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ರೇಪ್ ಕೇಸ್: ಸಿಸಿಟಿವಿಯಲ್ಲಿ ದಾಖಲಾಗಿದೆ ಭಯಾನಕ ದೃಶ್ಯ

ಕಾಂಗ್ರೆಸ್ ಬಿಕ್ಕಟ್ಟಿಗೆ ಮದ್ದು ಹಚ್ಚಲು ಬೆಂಗಳೂರಿಗೆ ಸುರ್ಜೇವಾಲ

ಮುಂದಿನ ಸುದ್ದಿ
Show comments