ಮನೆ ಬಿಟ್ಟು ನಾಪತ್ತೆಯಾದ ದಂಪತಿ ?

Webdunia
ಗುರುವಾರ, 23 ಮಾರ್ಚ್ 2023 (14:01 IST)
ಬೆಂಗಳೂರು : ಕ್ಷುಲ್ಲಕ ಕಾರಣಕ್ಕಾಗಿ ಮನೆ ಬಿಟ್ಟು ಹೋಗಿದ್ದ ದಂಪತಿಯನ್ನು ಠಾಣೆಗೆ ಕರೆಸಿ ರಾಜಿ ಮಾಡಿಸಿದ ಪ್ರಸಂಗ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
 
ಹೆಚ್ಚಿನ ಸಮಯ ಫೋನಿನಲ್ಲಿ ಮಾತನಾಡುವುದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿಕೊಂಡು ಪತ್ನಿ ಮನೆ ಬಿಟ್ಟಿದ್ದಾಳೆ. ಆಕೆಯನ್ನು ಪತ್ತೆಮಾಡಿ ಪತಿಗೆ ಒಪ್ಪಿಸಿದ ಎರಡೇ ದಿನದಲ್ಲಿ ಪತಿ ನಾಪತ್ತೆಯಾಗಿದ್ದಾನೆ. ಕೊನೆಗೆ ಇಬ್ಬರನ್ನೂ ಠಾಣೆಗೆ ಕರೆಸಿ ಪೊಲೀಸರು ರಾಜಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಅಶೋಕ್ (30) ಎಂಬುವವರ ಪತ್ನಿ, ನಾನು ಮತ್ತೆ ಬರುವುದಿಲ್ಲ. ತಾಳ್ಮೆ ಕಳೆದುಕೊಂಡಿದ್ದೇನೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮೆಸೇಜ್ ಕಳುಹಿಸಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಮಾರನೇ ದಿನ ಮಾ.10 ರಂದು ಅಶೋಕ್ ಕೋಣನಕುಂಟೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದ. ನಂತರ ಮಾ.12 ರಂದು ಉತ್ತರ ಕನ್ನಡದ ಶಿರಸಿಯ ಸ್ನೇಹಿತರ ಮನೆಯಲ್ಲಿರುವುದನ್ನು ಪೊಲೀಸರು ಪತ್ತೆಹಚ್ಚಿ ಗಂಡನೊಂದಿಗೆ ಕಳುಹಿಸಿದ್ದರು.

ಇದಾದ ಎರಡು ದಿನಗಳ ಬಳಿಕ ಪತಿ ನಾಪತ್ತೆಯಾಗಿದ್ದು ಪತ್ನಿ ಸುಕನ್ಯಾಬಾಯಿ (25) ಮಾ.14 ರಂದು ಪೊಲೀಸ್ ಠಾಣೆಗೆ ಬಂದು ಪತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಳು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಧಾನಸೌಧದ ಎದುರು ಕಿತ್ತಾಟ, 11ಮಂದಿ ಅರೆಸ್ಟ್‌

ತಿರುಮಲ ಲಡ್ಡು ಕಲಬೆರಕೆ ಪ್ರಕರಣ, ಮತ್ತೊಂದು ಬೆಚ್ಚಿಬೀಳಿಸುವ ಅಂಶ

ಕಾಂಗ್ರೆಸ್ ಎರಡೂವರೆ ವರ್ಷ ಪೂರೈಸಿದ್ದೇ ಸಾಧನೆ: ವಿಜಯೇಂದ್ರ

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ, ಡಿಕೆಶಿ ಆ ಸ್ಥಾನದಲ್ಲಿ ಮುಂದುವರೆಯಲು ಬಿಡಲ್ಲ: ಪ್ರಹ್ಲಾದ್ ಜೋಶಿ

ರೈಲಿನ ಎಸಿ ಕೋಚ್‌ನಲ್ಲಿ ಕೆಟಲ್‌ನಲ್ಲಿ ನೂಡಲ್ಸ್ ಮಾಡಿದ ಮಹಿಳೆಗೆ ಇದೀಗ ಢವಢವ

ಮುಂದಿನ ಸುದ್ದಿ
Show comments