ಕಡಲಿಗೆ ಹಾರಿ ಮದ್ಯವಯಸ್ಕ ಜೋಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಪಣಂಬೂರು ಬೀಚ್ ನಲ್ಲಿ ನಡೆದಿದೆ. ಮೃತರನ್ನು ಬೆಂಗಳೂರಿನ ಬಾಪೂಜಿ ನಗರ ನಿವಾಸಿ ಬೋರಲಿಂಗಯ್ಯ ಹಾಗು ಲಕ್ಷ್ಮಿ ಎಂದು ಗುರುತಿಸಲಾಗಿದೆ. ಬೋರಲಿಂಗಯ್ಯ ಅವರು ಮನೆಬಿಟ್ಟು ಮಂಗಳೂರಿಗೆ ಬಂದಿದ್ದರು. ಅವರನ್ನು ಬೆಂಗಳೂರಿಗೆ ಕರೆತರಲು ಲಕ್ಷ್ಮಿ ಮಂಗಳೂರಿಗೆ ಬಂದಿದ್ದರು.ಈ ವೇಳೆ ಇಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಪೋಲೀಸರು ಹೇಳಿದ್ದಾರೆ.