Select Your Language

Notifications

webdunia
webdunia
webdunia
webdunia

ಜೈಲಿನಲ್ಲಿ ಆಧ್ಯಾತ್ಮದ ಕಡೆ ವಾಲಿದ ದರ್ಶನ್‌ಗೆ ಪುಸ್ತಕ ಕೊರಿಯರ್

ಜೈಲಿನಲ್ಲಿ ಆಧ್ಯಾತ್ಮದ ಕಡೆ ವಾಲಿದ ದರ್ಶನ್‌ಗೆ ಪುಸ್ತಕ ಕೊರಿಯರ್

Sampriya

ಬೆಂಗಳೂರು , ಗುರುವಾರ, 1 ಆಗಸ್ಟ್ 2024 (17:46 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಅವರ ಮನಃಪರಿವರ್ತನೆಗೆ ಹುಬ್ಬಳ್ಳಿ ಸಿದ್ಧಾರೂಢ ಮಠದಿಂದ ಪುಸ್ತಕ ಕೊರಿಯರ್ ಮಾಡಲಾಗಿದೆ.

ಸಿದ್ಧಾರೂಢರ ಚರಿತ್ರೆ ಪುಸ್ತಕವನ್ನು ಪೋಸ್ಟ್ ಮೂಲಕ ದರ್ಶನ್ ಅವರಿಗೆ ಕಳುಹಿಸಲಾಗಿದೆ ಎಂದು ಮಠದ ಕಾರ್ಯದರ್ಶಿ ಡಾ.ಗೋವಿಂದ ಮಣ್ಣೂರು ಹೇಳಿದ್ದಾರೆ.  ಜೈಲಿನಲ್ಲಿ ದಿನ ಕಳೆಯಲು ಆಧ್ಯಾತ್ಮದ ಕಡೆ ವಾಲಿರುವ ದರ್ಶನ್‌ಗೆ ಈ ಪುಸ್ತಕ ತುಂಬಾನೇ ಸಹಾಯ ಮಾಡುತ್ತದೆ ಎಂದರು.

ಸುಮಾರು 200 ರಿಂದ 250 ಪುಟಗಳ ಪುಸ್ತಕ ಅದು. ಸಿದ್ದಾರೂಢರು ನಡೆದುಬಂದ ದಾರಿಯನ್ನು ಪುಸ್ತಕ ಒಳಗೊಂಡಿದೆ. ಪುಸ್ತಕ ಓದಿ ಖಂಡಿತ ದರ್ಶನ ಬದಲಾವಣೆ ಆಗುತ್ತಾರೆ ಎಂಬ ನಿರೀಕ್ಷೆ ನಮಗಿದೆ ಎಂದರು.

ಹುಬ್ಬಳ್ಳಿಯಲ್ಲಿರುವ ಸಿದ್ಧಾರೂಢ ಮಠದಲ್ಲಿ ದರ್ಶನ್ ಅವರ ಎರಡು ಸಿನಿಮಾಗಳು ಶೂಟಿಂಗ್ ಆಗಿವೆ. 2011ರಲ್ಲಿ ದರ್ಶನ್ ಅವರು ಮಠಕ್ಕೆ ಭೇಟಿ ನೀಡಿದ್ದು, ಈ ಹಿನ್ನೆಲೆ ಅವರ ಮನಸ್ಸಿನ ಪರಿವರ್ತೆನೆಗೆ ಈ ಪುಸ್ತಕವನ್ನು ಕಳುಹಿಸಲಾಗಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಲಿಮೆಂಟ್ ಒಳಗೆ ಮಳೆ ನೀರು ಸೋರಿಗೆ , ಹೊರಗೆ ಪ್ರಶ್ನೆಪತ್ರಿಕೆ ಸೋರಿಗೆ: ಕಾಂಗ್ರೆಸ್ ವ್ಯಂಗ್ಯ