Select Your Language

Notifications

webdunia
webdunia
webdunia
webdunia

ಜನರಿಗೆ ಕಾಟ ಕೊಡುತ್ತಿದ್ದ ಕರಡಿ ಸೆರೆ

A bear that was attacking people was captured
ಚಿತ್ರದುರ್ಗ , ಭಾನುವಾರ, 9 ಜುಲೈ 2023 (17:20 IST)
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಕೆಲ ದಿನಗಳಿಂದ ಕರಡಿಗಳ ಉಪಟಳ ಹೆಚ್ಚಾಗಿದೆ. ಜನರಿಗೆ ಕಾಟ ಕೊಡುತ್ತಿದ್ದ ಕರಡಿಗಳನ್ನು ಅರಣ್ಯಾಧಿಕಾರಿಗಳು ಸೆರೆಹಿಡಿದಿದ್ದಾರೆ. ಪಟ್ಟಣದ ಸಾಯಿಬಾಬಾ ದೇಗುಲ ಬಳಿ ಒಂದು ಕರಡಿ ಸೆರೆಯಾಗಿದೆ. ಕೆಲದಿನಗಳಿಂದ ಕರಡಿ ಜನರಿಗೆ ಜೀವಭಯವನ್ನು ತಂದೊಡ್ಡಿತ್ತು.. ಗೌಸಿಯಾ ಬಡಾವಣೆ, ಕಲ್ಲೇಶ್ವರ, ಕೋಟೆ ಬಡಾವಣೆಗಳಲ್ಲಿ ಸಂಚರಿಸಿದ್ದ ಕರಡಿ ಜನರಿಗೆ ಆತಂಕವನ್ನು ಸೃಷ್ಟಿಸಿತ್ತು. ಕೊನೆಗೂ ಕರಡಿಯನ್ನು ಸೆರೆಹಿಡಿಯಲಾಗಿದೆ. ಪೊದೆಯಲ್ಲಿ ಅವಿತಿದ್ದ ಕರಡಿಗೆ ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ.. ವಲಯ ಅರಣ್ಯಾಧಿಕಾರಿ ಸುಜಾತಾ ನೇತೃತ್ವದಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿಚಕ್ರ ವಾಹನ ಡಿಕ್ಕಿ; ಮೂವರಿಗೆ ಗಾಯ