ಮೋಡಿಗೆ ಬಿದ್ದ 15ರ ಬಾಲೆ! ಮುಂದೇನಾಯ್ತು?

Webdunia
ಸೋಮವಾರ, 10 ಜನವರಿ 2022 (14:14 IST)
ಬೆಂಗಳೂರು : ಸ್ವಾಮೀಜಿಯ ಮೋಡಿಗೆ ಮರುಳಾದ 15 ವರ್ಷದ ಬಾಲಕಿ ಮನೆಯವರನ್ನು ನಿರಾಕರಿಸಿ ಸ್ವಾಮೀಜಿ ಬಳಿ ಹೋಗಿದ್ದಾಳೆ ಎಂದು ಪೋಷಕರು ದೂರು ದಾಖಲಿಸಿದ್ದಾರೆ.

ಆತ್ಮಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಪೋಷಕರು ದೂರು ನೀಡಿದ್ದು, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ. 

ಜನವರಿ 1ರಂದು ಬಾಲಕಿ ಬೆಳಗ್ಗೆ 5:30ರ ಸುಮಾರಿಗೆ ತನ್ನ ತಾಯಿಯೊಂದಿಗೆ ಜಗಳ ಮಾಡಿದ್ದಾಳೆ. ತನ್ನ ತಾಯಿ ಹಾಗೂ ಮಾವ ಅವರನ್ನು ಕೂಡಿ ಹಾಕಿದ ಆಕೆ ಮನೆಯ ಚೀಲಕವನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಟಿವಿಎಸ್ ಸ್ಕೂಟರ್ ತೆಗೆದುಕೊಂಡು ಎಲ್ಲೋ ಹೋಗಿದ್ದಳು.

ಮಗಳು ಓದುತ್ತಿದ್ದ ಶಾಲೆ ಹಾಗೂ ತಿಳಿದಿರುವ ಕಡೆಯೆಲ್ಲಾ ಹುಡುಕಾಡಿ ನೋಡಿದಾಗ ಉತ್ತರಹಳ್ಳಿಯ ಸ್ವಾಮೀಜಿ ಮನೆಯ ಎದುರು ದ್ವಿಚಕ್ರವಾಹನ ನಿಂತಿತ್ತು.

ಈ ಹಿಂದೆ ನನ್ನ ಮಗಳಿಗೆ ದೀಕ್ಷೆ ಕೊಡುವುದಾಗಿ ಹೇಳುತ್ತಿದ್ದ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಮೇಲೆ ಅನುಮಾನವಿದ್ದು, ಕಾಣೆಯಾಗಿರುವ ನಮ್ಮ ಮಗಳನ್ನು ಹುಡುಕಿಕೊಡುವಂತೆ ದೂರಿನಲ್ಲಿ ತಿಳಿಸಿದ್ದಾರೆ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆಯಿಂದ ರೋಸಿ ಅಂಬೇಡ್ಕರ್ ಬೌದ್ಧ ಧರ್ಮ ಸೇರಿದ್ದರು: ಸಿದ್ದರಾಮಯ್ಯ

ಶುಗರ್ ಲೆವೆಲ್ ಲೋ ಆದರೆ ತಕ್ಷಣವೇ ಏನು ಮಾಡಬೇಕು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಸಿಎಂ ಆಗುವ ಆಸೆ ನನಗೂ ಇದೆ: ಕಾಂಗ್ರೆಸ್ ನ ಮತ್ತೊಬ್ಬ ಪ್ರಮುಖ ಸಚಿವರಿಂದ ಬಾಂಬ್

ಮುಂದಿನ ಸುದ್ದಿ
Show comments