ಹಲವು ದಶಕಗಳ ದಾಂಪತ್ಯ ವಿರಸದ ನಂತರ ಬದುಕಿನ ಮುಸಂಜೆಯಲ್ಲಿ 89 ವರ್ಷದ ವೃದ್ಧರೊಬ್ಬರು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದ್ದು, ವೃದ್ಧ ದಂಪತಿಗೆ ತಿಳಿ ಹೇಳುವ ಪ್ರಯತ್ನ ಮಾಡಿದೆ. ಭಾರತೀಯ ಸಮಾಜದಲ್ಲಿದಂಪತಿಗಳ ನಡುವೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಅಮೂಲ್ಯವಾದ ಭಾವನಾತ್ಮಕ ಜೀವನ ಜಾಲ ಎಂದು ಪರಿಗಣಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಈ ಅರ್ಜಿಯ ವಜಾಗೊಳಿಸುವ ವೇಳೆ ಹೇಳಿ ಆದೇಶವನ್ನು ಹೊರಡಿಸಿದೆ.