Select Your Language

Notifications

webdunia
webdunia
webdunia
webdunia

ಗೃಹಲಕ್ಷ್ಮಿ ಯೋಜನೆಗೆ 2ನೇ ದಿನದ ಅಂತ್ಯಕ್ಕೆ 8.8 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಕೆ

ಗೃಹಲಕ್ಷ್ಮಿ ಯೋಜನೆಗೆ 2ನೇ ದಿನದ ಅಂತ್ಯಕ್ಕೆ 8.8 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಕೆ
bangalore , ಶನಿವಾರ, 22 ಜುಲೈ 2023 (11:35 IST)
ಮನೆ ಯಜಮಾನಿಗೆ 2,000 ರೂಪಾಯಿ ನೀಡುವ ಗೃಹ ಲಕ್ಷ್ಮಿ ಯೋಜನೆಗೆ ನಿನ್ನೆ ಬರೊಬ್ಬರಿ 7.7 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.ಮೊದಲ ದಿನ 77 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿದ್ದು, 2 ದಿನಗಳಲ್ಲಿ 8,81,639 ಅರ್ಜಿ ಸಲ್ಲಿಕೆ ಮಹಿಳೆಯರು ಮಾಡಿದ್ದಾರೆ.ಮೊದಲ ದಿನ ಗುರುವಾರ ಹೆಚ್ಚು ಸೇವಾಕೇಂದ್ರಗಳಲ್ಲಿ ಸರ್ವರ್‌ ಸಮಸ್ಯೆಯಾಗಿದ್ದ ಹಿನ್ನೆಲೆ ಈ ಆಡಳಿತ ಇಲಾಖೆಯು ಅಗತ್ಯ ಕ್ರಮ ಕೈಗೊಂಡಿತ್ತು. ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಅರ್ಜಿ ಸಲ್ಲಿಕೆ ಬಹುತೇಕ ಕಡೆಗಳಲ್ಲಿ ಸರಾಗವಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ನಿತ್ಯ 8 ರಿಂದ 10 ಲಕ್ಷ ಮಂದಿ ಅರ್ಜಿ ಸ್ವೀಕರಿಸಿದರೆ 1.28 ಕೋಟಿ ಗುರಿಯನ್ನು ಆಗಸ್ಟ್‌ 10ರೊಳಗೆ ಪೂರ್ಣಗೊಳಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಇಲಾಖೆಯಿಂದ ಯಾವುದೇ ಗಡುವು ಇಲ್ಲ.ಮಹಿಳೆಯರು ನಿಗದಿ ಪಡಿಸಿದ ದಿನಾಂಕಗಳಂದು ಸೇವಾ ಕೇಂದ್ರಕ್ಕೆ ಹಾಜರಾಗುವಂತೆ ಸೇವಾ ಕೇಂದ್ರಗಳ ಅಧಿಕಾರಿಗಳು ಮನವಿ ಮಾಡಿದ್ದು,ನೋಂದಣಿ ದಿನಾಂಕ ಮೆಸೆಜ್‌ ಬಾರದಿದ್ದರೆ 1902 ಕರೆ ಮಾಡುವಂತೆ ಮಾಹಿತಿ ನೀಡಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲೇ ವಿವಾಹ ಪ್ರಮಾಣಪತ್ರ ಆನ್​ ಲೈನ್​ನಲ್ಲಿ ಲಭ್ಯ