Select Your Language

Notifications

webdunia
webdunia
webdunia
webdunia

ಶೇ.7.5 ಮೀಸಲಾತಿ ತಕ್ಷಣ ಜಾರಿಗೆ ಮುಖ್ಯಮಂತ್ರಿಗೆ ಆಗ್ರಹ

webdunia
belagavi , ಶುಕ್ರವಾರ, 17 ಡಿಸೆಂಬರ್ 2021 (18:22 IST)
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮುಖತಹ ಭೇಟಿ ಮಾಡಿ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ನಾಯಕ ಸಮಾಜದ ಸಮಾನ ಮನಸ್ಕರ ತಂಡ ಮನವಿ ಮಾಡಿತು. ಈ ವೇಳೆ ಶೇ.7.5 ಮೀಸಲಾತಿ ವಿಚಾರವನ್ನು ಬೆಳಗಾವಿ ಸದನದಲ್ಲಿ ಚೆರ್ಚೆ ಮಾಡಬೇಕು.  ಶೇ.7.5 ಮೀಸಲಾತಿ ವಿಚಾರವನ್ನು ತ್ರಿಸದಸ್ಯ ಸಮಿತಿಯಿಂದ ಹೊರಗಿಡಬೇಕು.  ಕೂಡಲೇ ಶೇ.7.5 ಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕು. ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಈಗ ಮೀಸಲಾತಿ ಜಾರಿಗೆ ಕಾಲ ಸನ್ನಿತವಾಗಿದೆ ಎಂದು ಭರವಸೆ ನೀಡಿದರು. ಈ ವೇಳೆ ನಾಯಕ ಸಮಾಜದ ಸಮಾನ ಮನಸ್ಕರು ಕೇವಲ ಭರವಸೆ ನೀಡಿದರೆ ಸಾಲದು, ಇದು ಜಾರಿಯಾಗದಿದ್ದರೆ ಯಾವುದೇ ಕಾರಣಕ್ಕೂ ನಾಯಕ ಸಮಾಜದ ಹೋರಾಟ ನಿಲ್ಲುವುದಿಲ್ಲ. ನಿರಂತರವಾಗಿ ನವೀನ ಮಾದರಿಯ ಹೊಸ ಕ್ರಾಂತಿ ಆರಂಭಿಸಲಾಗುವುದು ಎಂದು ನೇರವಾಗಿ ಆಗ್ರಹಿಸಿದರು. 
ಈ ವೇಳೆ ರಮೇಶ್ ಹಿರೇಜಂಬೂರು, ರಜನಿ. ಎಂ.ಆರ್., ಮಾರಣ್ಣ ಪಾಳೇಗಾರ್, ಭರತ್, ಶುಭ ವೇಣುಗೋಪಾಲ್, ಭಾರತಿ ನಾಯಕ್, ಕುಪ್ಪೂರು ಶ್ರೀಧರ್, ಕವಿತಾ, ಸುಧೀರ್ ಹುಳ್ಳೊಳ್ಳಿ ಮತ್ತಿತರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಟ್ ಕಾಯಿನ್ ಹಗರಣ: ಪೊಲೀಸರಿಂದ ಪಾರದರ್ಶಕ ನಡೆ; ಗೃಹ ಸಚಿವ ಆರಗ ಜ್ಞಾನೇಂದ್ರ