Select Your Language

Notifications

webdunia
webdunia
webdunia
webdunia

680 ಬಗೆ ಔಷಧಗಳ ಜನೌಷಧಿ ಕೇಂದ್ರಕ್ಕೆ ಚಾಲನೆ

680 ಬಗೆ ಔಷಧಗಳ ಜನೌಷಧಿ ಕೇಂದ್ರಕ್ಕೆ ಚಾಲನೆ
ನೆಲಮಂಗಲ , ಬುಧವಾರ, 5 ಡಿಸೆಂಬರ್ 2018 (20:57 IST)
ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲಕರವಾದ ಜನೌಷಧಿ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ.

 ರೋಗಿಗಳಿಗೆ ಕಡಿಮೆದರದಲ್ಲಿ ಔಷಧಿಗಳನ್ನು ವಿತರಿಸುವ ಯೋಜನೆಯಾದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಕ್ಕೆ ಚಾಲನೆ ದೊರೆಯಿತು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಉದ್ಘಾಟನೆಯಾಯಿತು. ಶೇಕಡಾ ಮೂವತ್ತರಿಂದ ಎಂಭತ್ತರವರೆಗೆ ದರ ಕಡಿತವಿರುವ ಜನೆರಿಕ್ ಔಷಧಗಳನ್ನು ವಿತರಿಸುವ ಕೇಂದ್ರವಾಗಿದೆ. ಗ್ರಾಮೀಣ ಭಾಗದ ರೋಗಿಗಳಿಗೆ ಹಲವಾರು ಜೀವ ರಕ್ಷಕ ಔಷಧಗಳು ಸೇರಿದಂತೆ, ಸಕ್ಕರೆ, ರಕ್ತದೊತ್ತಡ, ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳಿಗೆ ಔಷಧಿಗಳನ್ನು ನೀಡುವುದಾಗಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧಿಗಳು ದೊರೆಯುವುದರಿಂದ ಜೀವನ ವ್ಯವಸ್ಥೆ ಸುಧಾರಿಸಿದೆ ಎಂದು ಗ್ರಾಮಸ್ಥರು  ಸಂತಸ ವ್ಯಕ್ತಪಡಿಸಿದ್ದಾರೆ. ಸುಮಾರು 680 ಬಗೆಯ ಔಷಧಿಗಳು ಮಾರಾಟಕ್ಕೆ ದೊರೆಯಲಿದ್ದು, ಸಾರ್ವಜನಿಕರು ಉಪಯೋಗ ಪಡೆದುಕೊಳ್ಳಬಹುದಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ವೈ ಇಲ್ಲಾಂದ್ರೆ ಬಿಜೆಪಿಯನ್ನು ನಾಯಿ ಮೂಸುವುದಿಲ್ಲ ಅಂತ ಕೆಜೆಪಿ ಸಂಸ್ಥಾಪಕ ಹೇಳಿದ್ಯಾಕೆ?