Select Your Language

Notifications

webdunia
webdunia
webdunia
webdunia

ಮುಂಬೈ ನಂಟಿಗೆ ಬೆಚ್ಚಿಬಿದ್ದ ಜನ : 67 ಜನರಿಗೆ ಕೊರೊನಾ

ಮುಂಬೈ ನಂಟಿಗೆ ಬೆಚ್ಚಿಬಿದ್ದ ಜನ : 67 ಜನರಿಗೆ ಕೊರೊನಾ
ಹಾಸನ , ಗುರುವಾರ, 21 ಮೇ 2020 (16:10 IST)
ಮುಂಬೈ ಮೂಲದ ನಂಟಿನಿಂದ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, 13 ಜನರಲ್ಲಿ ಹೊಸದಾಗಿ ವೈರಸ್ ಪತ್ತೆಯಾಗಿದೆ.

ಹಾಸನ ಜಿಲ್ಲೆಯಲ್ಲಿ ಹೊಸದಾಗಿ 13 ಜನರಲ್ಲಿ ಕೋವಿಡ್-19 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ಹೊಸದಾಗಿ ವರದಿಯಾದ ಎಲ್ಲಾ ಪ್ರಕರಣಗಳಿಗೆ ಮುಂಬೈ ಮೂಲದ ನಂಟಿದೆ.

ಹಾಸನ ಜಿಲ್ಲೆಯ ಪಾಲಿಗೆ ಮಹಾರಾಷ್ಟ್ರದಿಂದ ಆಗಮಿಸಿದವರಿಂದ ಕರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಸೋಂಕು ಪತ್ತೆಯಾದವರಲ್ಲಿ ಆರು ಮಂದಿ ಹೊಳೆನರಸೀಪುರ ತಾಲ್ಲೂಕು ಹಾಗೂ 7ಮಂದಿ ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದವರಾಗಿದ್ದಾರೆ.

ಈ ವರೆಗಿನ ವರದಿಯಂತೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಗರಿಷ್ಠ 42 ಮಂದಿ ಸೋಂಕಿತರು ಪತ್ತೆಯಾಗಿದ್ದು, ಹೊಳೆನರಸೀಪುರ 16, ಆಲೂರು 3,  ಅರಕಲಗೂರು 2, ಅರಸೀಕೆರೆ 1, ಹಾಸನದಲ್ಲಿ 3 ಪ್ರಕರಣ ದಾಖಲಾಗಿವೆ. ಹಾಸನ ತಾಲ್ಲೂಕಿನ ಮೂರು ಪ್ರಕರಣಗಳಲ್ಲಿ ಎರಡು ತಮಿಳುನಾಡು ಮೂಲದಿಂದ ಬಂದಿದ್ದು, ಉಳಿದ ಜಿಲ್ಲೆಯ ಎಲ್ಲಾ ಇತರ 65 ಪ್ರಕರಣಗಳು ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ  ದೃಢಪಟ್ಟಿವೆ.

ಎಲ್ಲಾ ಸೋಂಕಿತರನ್ನು ಹಾಸನದ ಕೋವಿಡ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಶಂಕಿತರು ವಿವಿಧ ತಾಲ್ಲೂಕುಗಳಲ್ಲಿ ಸಾಂಸ್ಥಿಕ ಕೇಂದ್ರಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ, ತೆಲಂಗಾಣ ನಂಟು : ಐವರಲ್ಲಿ ಕೊರೊನಾ ಪಾಸಿಟಿವ್