Webdunia - Bharat's app for daily news and videos

Install App

643 ಡೀಸೆಲ್ ಬಸ್ ಖರೀದಿಗೆ ಒಪ್ಪಿಗೆ

Webdunia
ಭಾನುವಾರ, 10 ಅಕ್ಟೋಬರ್ 2021 (11:40 IST)
ಬೆಂಗಳೂರು : 300 ಎಲೆಕ್ಟ್ರಿಕ್ ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯುವ ಮತ್ತು 643 ಡೀಸೆಲ್ ಬಸ್ಗಳನ್ನು(ಬಿಎಸ್-6) ಖರೀದಿಸುವ ಪ್ರಸ್ತಾವಗಳಿಗೆ ಬಿಎಂಟಿಸಿ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ.

ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚವನ್ನು ಕಿಲೋ ಮೀಟರ್ಗೆ ₹48.90 ನಿಗದಿ ಮಾಡಿದ್ದ ಅಶೋಕ್ ಲೇಲ್ಯಾಂಡ್ ಕಂಪನಿಗೆ ಕಾರ್ಯಾದೇಶ ನೀಡಲು ಮಂಡಳಿ ಅನುಮೋದನೆ ನೀಡಿದೆ. ಇತರ ಕಂಪನಿಗಳು ಇದಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿದ್ದರಿಂದ ಅವುಗಳನ್ನು ಕೈಬಿಡಲಾಗಿದೆ.
12 ಮೀಟರ್ ಉದ್ದದ 43 ಆಸನಗಳ ಸಾಮರ್ಥ್ಯದ ಎಲೆಕ್ಟ್ರಿಕ್ ಬಸ್ ದಿನಕ್ಕೆ ಕನಿಷ್ಠ 225 ಕಿ.ಮೀ ಸಂಚಾರ ಆಗಬೇಕು. ಆಗದಿದ್ದರೂ, ಅದರ ಮೊತ್ತವನ್ನು(11 ಸಾವಿರ) ಪಾವತಿಸಬೇಕು ಎಂಬ ಒಪ್ಪಂದ ಏರ್ಪಡಲಿದೆ. ಚಾಲಕ ಮತ್ತು ಬಸ್ನ ಬ್ಯಾಟರಿ ಚಾರ್ಜಿಂಗ್ ಸೇರಿ ಬಸ್ ನಿರ್ವಹಣೆ ಹೊಣೆ ಕಂಪನಿಯದ್ದು. ನಿರ್ವಾಹಕರನ್ನು ಮತ್ತು ಚಾರ್ಜಿಂಗ್ ಪಾಯಿಂಟ್ಗಳಿಗೆ ಜಾಗವನ್ನು ಬಿಎಂಟಿಸಿಯೇ ಒದಗಿಸಲಿದೆ.
ಇದಲ್ಲದೇ 643 ಡೀಸೆಲ್ ಬಸ್ಗಳ ಖರೀದಿಗೂ ಮಂಡಳಿ ಒಪ್ಪಿಗೆ ನೀಡಿದೆ. ಕಡಿಮೆ ದರ ನಿಗದಿ ಮಾಡಿರುವ ಅಶೋಕ್ ಲೇಲ್ಯಾಂಡ್ ಕಂಪನಿಯಿಂದಲೇ ಬಸ್ಗಳನ್ನು ಖರೀದಿ ಮಾಡಲು ಮಂಡಳಿ ತೀರ್ಮಾನಿಸಿದೆ. ಪ್ರತಿ ಬಸ್ಗೆ ₹33 ಲಕ್ಷ ದರ ನಿಗದಿಯಾಗಿದೆ.
2017-18ನೇ ಸಾಲಿನಲ್ಲಿ ನಿಗದಿಯಾಗಿದ್ದ ಅನುದಾನ ಬಳಸಿಕೊಂಡು ಬಸ್ಗಳ ಖರೀದಿಗೆ ತೀರ್ಮಾನಿಸಲಾಗಿದೆ ಎಂದು ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್ 'ಪ್ರಜಾವಾಣಿ'ಗೆ ತಿಳಿಸಿದರು.
ಎಲೆಕ್ಟ್ರಾನಿಕ್ ಟಿಕೆಟ್ ಮೆಷೀನ್ (ಇಟಿಎಂ) ಖರೀದಿ, ನಿರ್ಭಯಾ ಯೋಜನೆಯಡಿ ಬಸ್ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಗೂ ಮಂಡಳಿ ಒಪ್ಪಿಗೆ ನೀಡಿದೆ ಎಂದು ವಿವರಿಸಿದರು.
ನೌಕರರ ಮರುನೇಮಕ ಸಿಎಂ ತೀರ್ಮಾನಕ್ಕೆ
ಮುಷ್ಕರದ ವೇಳೆ ವಜಾಗೊಂಡಿದ್ದ ಬಿಎಂಟಿಸಿ ನೌಕರರ ಮರುನೇಮಕದ ವಿಷಯವನ್ನು ಮುಖ್ಯಮಂತ್ರಿ ಅವರ ತೀರ್ಮಾನಕ್ಕೆ ಬಿಡಲು ಸಭೆ ತೀರ್ಮಾನಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments