Select Your Language

Notifications

webdunia
webdunia
webdunia
webdunia

601 ಸೀರೆಗಳಲ್ಲಿ ದೇವಿಗೆ ಅಲಂಕಾರ

601 Decoration of Goddess in sarees
bangalore , ಶುಕ್ರವಾರ, 12 ಆಗಸ್ಟ್ 2022 (20:04 IST)
ಐತಿಹಾಸಿಕ ಬದಾಮಿಯ ಬನಶಂಕರಿ ದೇವಿಗೆ ಇಂದು ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯ್ತು. ಶಕ್ತಿ ದೇವತೆಗೆ ನೇಕಾರರು ನೀಡಿದ ಸುಮಾರು 601 ಸೀರೆಗಳಿಂದ ಬನಶಂಕರಿ ದೇವಿಯನ್ನ ಅಲಂಕರಿಸಲಾಗಿತ್ತು. ದೇವಾಂಗ ಸಮಾಜನದ ಬಂಧುಗಳ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ಇಂದು ಹುಣ್ಣಿಮೆ ಆಗಿದ್ರಿಂದ ದೇವಿಯನ್ನ ಕಣ್ತುಂಬಿಕೊಳ್ಳಲು ನೂಕು ನುಗ್ಗಲು ಉಂಟಾಗಿತ್ತು. ಜೊತೆಗೆ ದೇವಾಲಯ ಸುತ್ತಮುತ್ತ ವಿವಿಧ ಬಗೆಯ ಸೀರೆಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗಾವಿಯ ರಾಮದುರ್ಗದಿಂದ ಸೀರೆಗಳನ್ನ ಮೆರೆವಣಿಗೆ ಮಾಡುವ ಮೂಲಕ ದೇವಾಂಗ ಸಮಾಜದ ಬಂಧುಗಳು ಬದಾಮಿಗೆ ತೆಗೆದುಕೊಂಡು ಬಂದ್ರು. ಇಂದು ನೂಲು ಹುಣ್ಣಿಮೆ ನಿಮಿತ್ತ ಬನಶಂಕರಿ ದೇವಾಲಯಕ್ಕೆ ಭಕ್ತರ ದಂಡು ಹರಿದು ಬರ್ತಿದ್ದಾರೆ. ಜೊತೆಗೆ ಭಕ್ತರು ದೇವಿಯನ್ನ ಕಣ್ತುಂಬಿಕೊಂಡು ಪುನೀತರಾದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸುಟ್ಟು ಕರಕಲಾದ ಬೇಕರಿ