Publish Date: Fri, 12 Aug 2022 (20:02 IST)
Updated Date: Fri, 12 Aug 2022 (20:04 IST)
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿ ಬೇಕರಿ ಹೊತ್ತಿ ಉರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೊರ್ಲಕಟ್ಟಾದಲ್ಲಿ ನಡೆದಿದೆ. ಬೇಕರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಮಹಂತೇಶ್ ಮಾಳಂಜಿ ಎನ್ನುವವರಿಗೆ ಸೇರಿದ್ದ ಬೇಕರಿ ಇದಾಗಿದೆ. ಬೆಂಕಿ ಅವಘಡದಿಂದ ಬೇಕರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಭಾರಿ ಅನಾಹುತವನ್ನ ತಪ್ಪಿಸಿದ್ದಾರೆ.