Publish Date: Sun, 01 Jan 2023 (19:06 IST)
Updated Date: Sun, 01 Jan 2023 (19:09 IST)
ಬಾಗೇಪಲ್ಲಿ ಪೊಲೀಸರ ಕಾರ್ಯಾಚರಣೆ ಮಾಡಲಾಗಿದೆ. 6 ಮಂದಿ ದರೋಡೆಕೋರರ ಬಂಧಿಸಲಾಗಿದೆ. ಇವರು ಎನ್ ಜಿಓ ಸಂಸ್ಥೆಯ ನೆಪದಲ್ಲಿ ದರೋಡೆಗಿಳಿದಿದ್ರು, ಆಂಧ್ರದ ಗೋರಂಟ್ಲದ ಸಂತೆಯಿಂದ ದನ ಕರುಗಳನ್ನ ಖರೀದಿಸಿ ಸ್ವಗ್ರಾಮಕ್ಕೆ ಹೋಗುವಾಗ ತಾವು ಎನ್ ಜಿಓ ಸಂಸ್ಥೆಯವರೆಂದು ರೈತರಿಗೆ ಹಲ್ಲೆ ಮಾಡಿ 51 ಸಾವಿರ ನಗದು, 7 ದನಕರುಗಳನ್ನ ದರೋಡೆ ಮಾಡಿದ್ರು. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲ್ಲೂಕು ನರಸಾಪುರದ ಬಳಿ ಈ ಘಟನೆ ನಡೆದಿತ್ತು. ಕೃತ್ಯ ನಡೆದ ಎರಡೇ ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ ಪೊಲೀಸರು. ಬಾಗೇಪಲ್ಲಿ ತಾಲ್ಲೂಕಿನ ಚಿಂತಮಾಕಲದಿನ್ನೆ ಗ್ರಾಮದ ನವೀನ್, ಕಲ್ಲೇಪಲ್ಲಿ ಗ್ರಾಮದ ಮಹೇಶ್, ಸಜ್ಜುವಾರಿಪಲ್ಲಿ ಗ್ರಾಮದ ಮಣಿಕಂಠ, ದೇವನಹಳ್ಳಿಯ ಸುಧಾಕರ, ಗಣೇಶ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ದನಕರುಗಳು, 45.500 ನಗದು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳ ಜಫ್ತಿ ಮಾಡಲಾಗಿದೆ.