Select Your Language

Notifications

webdunia
webdunia
webdunia
webdunia

ಕೇರಳದಲ್ಲಿ 5ನೇ ನಿಫಾ ಪ್ರಕರಣ ಪತ್ತೆ

ಕೇರಳದಲ್ಲಿ 5ನೇ ನಿಫಾ ಪ್ರಕರಣ ಪತ್ತೆ
kerala , ಗುರುವಾರ, 14 ಸೆಪ್ಟಂಬರ್ 2023 (20:34 IST)
ಕೇರಳದಲ್ಲಿ ನಿಪಾ ವೈರಾಣುವಿನ ಐದನೇ ಪ್ರಕರಣ ದೃಢಪಟ್ಟಿದೆ. ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ಅರೋಗ್ಯ ಕಾರ್ಯಕರ್ತರಿಗೆ ನಿಪಾ ಸೋಂಕು ತಗುಲಿದೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ. ತೀವ್ರ ನಿಗಾ ಘಟಕದಲ್ಲಿರುವ ಸೋಂಕಿತ ಒಂಬತ್ತು ವರ್ಷದ ಬಾಲಕನ ಪರಿಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ಮಾತ್ರ ಲಭ್ಯವಿರುವ ನಿಪಾ ಸೋಂಕಿನಿಂದ ರಕ್ಷಣೆ ನೀಡಬಲ್ಲ ಮೊನೊಕ್ಲೋನಲ್ ಪ್ರತಿಕಾಯ ತುರ್ತಾಗಿ ತರಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.ರೋಗಿಯೊಂದಿಗೆ ನಿಕಟ ಸಂಪರ್ಕ ಹೊಂದಿದ ಶಂಕೆ ಹಿನ್ನೆಲೆಯಲ್ಲಿ 76 ಮಂದಿ 'ಹೈ ರಿಸ್ಕ್' ವಿಭಾಗದಲ್ಲಿದ್ದು, ಈ ಪೈಕಿ 13 ಮಂದಿಯಲ್ಲಿ ಸೌಮ್ಯ ರೋಗಲಕ್ಷಣ ಕಂಡುಬಂದಿದೆ. ಅವರೆಲ್ಲರೂ ಪ್ರತ್ಯೇಕ ವಾಸದಲ್ಲಿದ್ದು, ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಸೆಪ್ಟೆಂಬರ್ 24ರ ವರೆಗೆ ಕೋಯಿಕ್ಕೋಡ್‌ನಲ್ಲಿ ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೃತರ ಸಂಖ್ಯೆ 20 ಸಾವಿರಕ್ಕೆ ಏರಿಕೆ?