Publish Date: Tue, 23 Jan 2024 (17:00 IST)
Updated Date: Tue, 23 Jan 2024 (17:25 IST)
ಬೆಂಗಳೂರು-ಇಂದು 545 ಪಿಎಸ್ಐ ನೇಮಕಾತಿ ಮರು ಪರೀಕ್ಷಾ ಕೇಂದ್ರಗಳ ಸುತ್ತಾ ಮುತ್ತಾ 200 ಮೀಟರ್ ವ್ಯಾಪ್ತಿಯಲ್ಲಿ (144 ಸೆಕ್ಷನ್) ನಿಷೇಧಾಜ್ಙೆ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ರಿಂದ ಆದೇಶ ಹೊರಡಿಸಲಾಗಿದೆ.ಪರೀಕ್ಷೆ ವೇಳೆ ಯಾವುದೇ ಪರೀಕ್ಷಾ ಅಕ್ರಮ ಚಟುವಟಿಕೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲೂ 144 ಸೆಕ್ಷನ್ ಜಾರಿ ಮಾಡಿ ಕಮಿಷನರ್ ಆದೇಶಿಸಿದ್ದಾರೆ.
ಇಂದು ಬೆಂಗಳೂರು ನಗರದ 117 ಕೇಂದ್ರಗಳಲ್ಲಿ ನಡೆಯಲಿರ ಪಿಎಸ್ಐ ನೇಮಕಾತಿ ಮರು ಪರೀಕ್ಷೆ ನಡೆಯಲಿದೆ.ಎಲ್ಲಾ ಪರೀಕ್ಷೆ ಕೇಂದ್ರಗಳ ಸುತ್ತಾ ಮುತ್ತಾ 144 ಸೆಕ್ಷನ್ ಜಾರಿಯಾಗಲಿದೆ.ಎಲ್ಲಾ ಪರೀಕ್ಷೆ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಶಾಪ್ ಗಳು ಕ್ಲೋಸ್ ಆಗಿರಬೇಕು.ಬೆಳಗ್ಗೆ 7ಗಂಟೆಯಿಂದ ಪರೀಕ್ಷೆ ಮುಗಿಯೋವರೆಗೂ ಜೆರಾಕ್ಸ್ ಶಾಪ್ ಗಳನ್ನ ಮುಚ್ಚುವಂತೆ ಆದೇಶವಿದೆ.