ಶೀಘ್ರದಲ್ಲೇ 5000 ಶಿಕ್ಷಕರ ನೇಮಕ: ಸಿಎಂ ಬೊಮ್ಮಾಯಿ ಘೋಷಣೆ

Webdunia
ಭಾನುವಾರ, 5 ಸೆಪ್ಟಂಬರ್ 2021 (19:54 IST)
ಶಿಕ್ಷಕರ ನೇಮಕಾತಿ ಬಹಳ‌ ದಿನಗಳಿಂದ ಉಳಿದುಕೊಂಡಿದೆ. ಹೀಗಾಗಿ ಇಂದಿನ ಶೈಕ್ಷಣಿಕ ವರ್ಷದಲ್ಲಿ ಶೀಘ್ರದಲ್ಲೇ 5000 ಶಿಕ್ಷಕರ ನೇಮಕಾತಿಗೆ ತೀರ್ಮಾನ ಮಾಡಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಯಿ ಹೇಳಿದ್ದಾರೆ.
ಶಿಕ್ಷಕರ ದಿನಾಚರಣೆ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವರ್ಷದೊಳಗೆ 5000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.
ಹೊಸ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ ಅದು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ನೀತಿ ಸ್ವತಂತ್ರ ಭಾರತದಲ್ಲಿ ಮೊದಲ ಬಾರಿ ಜಾರಿಗೆ ಬಂದಿದೆ. ಹೊಸ ಶಿಕ್ಷಣ ನೀತಿ ಕ್ರಾಂತಿಕಾರಿ ಹೆಜ್ಜೆ, ಶಿಕ್ಷಕರೂ ಸರ್ಕಾರ ಸಂಸ್ಥೆಗಳೂ ಕೂಡ ಇದಕ್ಕೆ ಸಿದ್ದರಾಗಬೇಕು ಹೊಸ ನೀತಿ ಬಂದಾಗ ಪರ ವಿರೋಧ ಇರೋದು ಸಹಜ ಎಂದು ಅವರು ಕರೆ ನೀಡಿದರು.
ಇವತ್ತಿನ ಸವಾಲುಗಳನ್ನು ಎದುರಿಸಲು ಮಕ್ಕಳನ್ನು
ತಯಾರು ಮಾಡಬೇಕು ದೇಶವನ್ನು ಬೆಳೆಸುವ ಶಕ್ತಿ ನಮ್ಮ ಗುರುಗಳಲ್ಲಿದೆ,ದೇಶದ ಭವಿಷ್ಯ ಬರೆಯುವ ಎಲ್ಲ ಶಕ್ತಿ ಶಿಕ್ಷಕರಲ್ಲಿದೆ, ನಮ್ಮ ಮಕ್ಕಳಲ್ಲಿ ಬದಲಾವಣೆ ಬಂದು ಮಕ್ಕಳಿಗೆ ಯಶಸ್ಸು ಸಿಕ್ಕಿದರೆ ಅದು ನಮ್ಮದೇ ಯಶಸ್ಸು ಎಂದು ಶಿಕ್ಷಕರಿಗೆ ಸಿಎಂ ಕಿವಿ ಮಾತು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಮುಖ ಘಟ್ಟದಲ್ಲಿರುವ ದೆಹಲಿ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಶಬರಿಮಲೆಯಲ್ಲಿ ಭಕ್ತರಿಗೆ ತೊಂದರೆ, ಕೇರಳ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡ ಅಣ್ಣಾಮಲೈ

ಜೆಡಿಎಸ್‌ನಲ್ಲಿಯೇ ಇರುತ್ತಿದ್ದರೆ ದೇವೇಗೌಡ, ಅವರ ಮಕ್ಕಳು ಸಿಎಂ ಆಗಕ್ಕೆ ಬಿಡ್ತಿರ್ಲಿಲ್ಲ: ಸಿದ್ದರಾಮಯ್ಯ

ದೆಹಲಿ ವಿಮಾನವೇರಿದ ಡಿಕೆಶಿ, ಶಾಸಕರನ್ನು ಇಲ್ಲೇ ಕಟ್ಟಿಹಾಕಲು ಸಿಎಂ ಮಾಸ್ಟರ್ ಪ್ಲಾನ್‌

ದೆಹಲಿ, ಶಿಕ್ಷಕರ ಇದೇ ನಡವಳಿಕೆಯಿಂದ ಮಗ ಪ್ರಾಣ ಕಳೆದುಕೊಂಡ

ಮುಂದಿನ ಸುದ್ದಿ
Show comments