Select Your Language

Notifications

webdunia
webdunia
webdunia
webdunia

ಹಿರಿಯ ನಾಗರಿಕರಿಗೆ ಫ್ಲೈಟ್‌ ಟಿಕೆಟ್ ಮೇಲೆ ಶೇ.50 ರಷ್ಟು ವಿನಾಯಿತಿ

ಹಿರಿಯ ನಾಗರಿಕರಿಗೆ ಫ್ಲೈಟ್‌ ಟಿಕೆಟ್ ಮೇಲೆ ಶೇ.50 ರಷ್ಟು ವಿನಾಯಿತಿ
bangalore , ಭಾನುವಾರ, 3 ಅಕ್ಟೋಬರ್ 2021 (21:13 IST)
ಹಿರಿಯ ನಾಗರಿಕರಿಗೆ ವಿಮಾನ ಪ್ರಯಾಣದ ಟಿಕೆಟ್‌ ದರದಲ್ಲಿ 50% ರಿಯಾಯಿತಿಯನ್ನು ಏರ್‌ ಇಂಡಿಯಾ ಪರಿಚಯಿಸಿದೆ. ಈ ಆಫರ್‌ ಅಡಿಯಲ್ಲಿ, ಫ್ಲೈಟ್‌ ಟಿಕೆಟ್‌ ದರದ ಮೂಲ ಬೆಲೆಯಲ್ಲಿ 50% ವಿನಾಯಿತಿ ನೀಡಲಾಗುವುದು.ಏರ್‌ ಇಂಡಿಯಾದ ತನ್ನ ವಾಣಿಜ್ಯ ವಿಮಾನಗಳನ್ನು ಕಾರ್ಯಾಚರಿಸುವ ಮಾರ್ಗಗಳಲ್ಲಿ ಈ ಆಫರ್‌ ಅನ್ವಯವಾಗಲಿದೆ. ಕನಿಷ್ಠ ಮೂರು ದಿನಗಳ ಮುಂಚೆಯೇ ಟಿಕೆಟ್ ಪಡೆಯುವ ಹಿರಿಯ ನಾಗರಿಕರು ಈ ಆಫರ್‌ ಅನುಭವಿಸಬಹುದು. 60 ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯರಿಗೂ ಈ ಆಫರ್‌ ಅನ್ವಯವಾಗಲಿದೆ.ಡಿಸೆಂಬರ್‌ 2020ರಲ್ಲಿ ಜಾರಿಗೆ ಬಂದ ಈ ಸ್ಕೀಂನಲ್ಲಿ ಫೋಟೋ ಸಹಿತ ಗುರುತಿನ ದಾಖಲೆಗಳನ್ನು ಪ್ರಸ್ತುತಪಡಿಸುವ ಹಿರಿಯ ನಾಗರಿಕರಿಗೆ ಮಾತ್ರವೇ ವಿನಾಯಿತಿ ನೀಡಲಾಗುವುದು. ತನ್ನ ವಿಮಾನಗಳಲ್ಲಿ ಡಿಸೆಂಬರ್‌ 2021ರವರೆಗೂ ಕಾರ್ಯಾಚರಿಸಲು ಏರ್‌ ಇಂಡಿಯಾ ನಿರ್ಧರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ತವ್ಯನಿರತ ಪೊಲೀಸ್ ಇನ್ಸ್ಪೆಕ್ಟರ್ ವಾಕಿ ಟಾಕಿಯನ್ನೇ ಕದ್ದ ಖದೀಮರು: ಠಾಣೆಯಲ್ಲಿ ಎಫ್ಐಆರ್