Select Your Language

Notifications

webdunia
webdunia
webdunia
webdunia

ಕೆಪಿಸಿಸಿ ಅಧ್ಯಕ್ಷರಾಗಿ 5ವರ್ಷ: ಡಿಕೆಶಿ ಏರ್ಪಡಿಸಿದ ಔತಣಕೂಟದಲ್ಲಿ ಬಿಜೆಪಿ ಇಬ್ಬರು ಶಾಸಕರು ಭಾಗಿ

KPCC President DK Shivkumar

Sampriya

ಬೆಂಗಳೂರು , ಗುರುವಾರ, 13 ಮಾರ್ಚ್ 2025 (21:49 IST)
Photo Courtesy X
ಬೆಂಗಳೂರು: ಇದೇ ಜುಲೈ 2ಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸುತ್ತಿರುವ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಒಂದು ಆಪ್ತರಿಗೆ ಔತಣಕೂಟ ಏರ್ಪಡಿಸಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಡಿಕೆಶಿ ಭೋಜನಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ನ ಶಾಸಕರು, ಸಚಿವರು ಭಾಗವಹಿಸಿದರು.

ಇನ್ನೂ ವಿಶೇಷ ಏನೆಂದರೆ ಈ ಔತಣಕೂಟದಲ್ಲಿ ಬಿಜೆಪಿಯ ಇಬ್ಬರು ಭಾಗಿಯಾಗಿರುವುದು.
 ಇನ್ನು ಡಿಕೆಶಿ ಆಯೋಜಿಸಿರುವ ಈ ಔತಣಕೂಟದಲ್ಲಿ ಬಿಜೆಪಿ ಶಾಸಕರಾದ ಎಸ್​ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.


ಕಾಂಗ್ರೆಸ್ ಔತಣಕೂಟದಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಶಿವರಾಮ್ ಹೆಬ್ಬಾರ್ ಸಹ ಭಾಗವಹಿಸಿದ್ದು, ಡಿಕೆಶಿಗೆ ಶುಭಾಶಯ ತಿಳಿಸಿ ಔತಣಕೂಟವನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೋಳಿ ಹಬ್ಬಕ್ಕೆ ಜನತೆಗೆ ಶುಭಕೋರಿದ ಪ್ರಧಾನಿ ಮೋದಿ