Webdunia - Bharat's app for daily news and videos

Install App

ರಾಹುಲ್ ಗಾಂಧಿ ಪಾದಯಾತ್ರೆ 5 ಸ್ಟಾರ್ ಕಂಟೇನರ್ ಗಳು ಸಿದ್ಧ

Webdunia
ಶನಿವಾರ, 10 ಸೆಪ್ಟಂಬರ್ 2022 (16:52 IST)
ದೆಹಲಿ: ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ಭಾರತ್‌ ಜೋಡೋ ಪಾದಯಾತ್ರೆ ವೇಳೆ ನೂರಾರು ಯಾತ್ರಿಗಳ ಜೊತೆ 60 ಕಂಟೇನರ್‌ಗಳು ಕೂಡ ಸಾಗುತ್ತಿವೆ.
 
150 ದಿನಗಳ ಕಾಲ ಈ ಕಂಟೇನರ್‌ಗಳೂ ಸಾಥ್‌ ನೀಡಲಿವೆ.
ಪಾದಯಾತ್ರೆ ವೇಳೆ ಕನಿಷ್ಠ 200 ಜನರು ಕಾಯಂ ಆಗಿ ಇರಲಿದ್ದಾರೆ. ಪ್ರತಿ ದಿನ ಯಾತ್ರೆಯ ಬಳಿಕ ಉಳಿದುಕೊಳ್ಳಲು ಇವರಿಗೆ ಹೋಟೆಲ್‌ಗಳ ಬದಲು ಕಂಟೇನರ್‌ಗಳ ವ್ಯವಸ್ಥೆ ಮಾಡಲಾಗಿದೆ.
 
ಕಂಟೇನರ್‌ಗಳನ್ನು ಸಣ್ಣ ಕೊಠಡಿಯ ರೂಪದಲ್ಲಿ ಸುಸಜ್ಜಿತಗೊಳಿಸಲಾಗಿದ್ದು, ಎಲ್ಲಾ 60 ಕಂಟೇನರ್‌ಗಳು ಹಾಸಿಗೆ, ಸ್ನಾನದ ಕೊಠಡಿ, ಸೋಫಾ, ಕುರ್ಚಿ ಸೇರಿ ಹಲವು ಸೌಲಭ್ಯಗಳನ್ನು ಒಳಗೊಂಡಿವೆ.
ಕಂಟೇನರ್‌ಗಳಲ್ಲಿ 2, 4, 6 ಮತ್ತು ಗರಿಷ್ಠ 12 ಮಂಚಗಳನ್ನೂ ಅಳವಡಿಸಲಾಗಿದೆ. ಟೀವಿಗಳನ್ನು ಅಳವಡಿಸಲಾಗಿಲ್ಲ. ಆದರೆ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಕೆಲವು ಕಂಟೇನರ್‌ಗಳಲ್ಲಿ ಮಾತ್ರ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments