Publish Date: Mon, 25 Apr 2022 (18:40 IST)
Updated Date: Mon, 25 Apr 2022 (18:43 IST)
ರಾಜ್ಯದಲ್ಲಿ ಮತ್ತೆ ಕೊರೋನಾ ತನ್ನ ಆರ್ಭಟ ಮುಂದುವರೆಸಿದೆ..ಈ ಕುರಿತು ವೈದ್ಯರು ಸಹ ಮಾಹಿತಿ ನೀಡುತ್ತಿದ್ದಾರೆ..ನಾಲ್ಕನೆ ಅಲೆ ಅಷ್ಟೊಂದು ಪ್ರಭಾವ ಬೀರುವ ಸಾಧ್ಯತೆ ಇಲ್ಲ ಎಂದು ಆನೇಕಲ್ನಲ್ಲಿ ನಾರಾಯಣ ಹೆಲ್ತ್ ಸಿಟಿ ಮುಖ್ಯಸ್ಥ ಡಾ.ದೇವಿ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ..ಕೊರೊನಾ 3ನೇ ಅಲೆಯಲ್ಲಿ ಕೂಡ ಆತಂಕ ಇತ್ತು..ಆದ್ರೆ, ನಮ್ಮಲ್ಲಿ ಅದರ ಪ್ರಭಾವ ಅಷ್ಟೊಂದು ಕಂಡು ಬಂದಿರಲಿಲ್ಲ..ಸೋಂಕು ಕಂಡುಬಂದಾಗ ಕೂಡಲೇ ಆಸ್ಪತ್ರೆಗೆ ಹೋಗಿ ಎಲ್ಲರೂ ಮುನ್ನೆಚ್ಚರಿಕೆಯ ಕ್ರಮವಹಿಸಬೇಕು..ಇದರಿಂದಾಗಿ ಯಾರು ಕೂಡ ಭಯ ಪಡುವ ಅಗತ್ಯವಿಲ್ಲ..ಮಾಸ್ಕ್ ಧರಿಸಿ, ಸುರಕ್ಷತೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಿ ಎಂದು ಡಾ.ದೇವಿ ಶೆಟ್ಟಿ ಸೂಚನೆ ನೀಡಿದ್ದಾರೆ.
Geetha
Publish Date: Mon, 25 Apr 2022 (18:40 IST)
Updated Date: Mon, 25 Apr 2022 (18:43 IST)