ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಸರಾಸರಿ 15 ಸಾವಿರ ಮೆ.ವ್ಯಾಟ್ ತಲುಪಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಲಾಗದೆ ನಿತ್ಯ 3 ಸಾವಿರದಿಂದ 4 ಸಾವಿರ ಮೆ.ವ್ಯಾಟ್‌ನಷ್ಟು ವಿದ್ಯುತ್ ಕಡಿಮೆ ಬಳಸುವ ಮೂಲಕ ಅನಧಿಕೃತ ಲೋಡ್ ಶೆಡ್ಡಿಂಗ್‌ಗೆ ಇಂಧನ ಇಲಾಖೆ ಮೊರೆ ಹೋಗಿದೆ. ಈ ಬಗ್ಗೆ ಕೆಪಿಟಿಸಿಎಲ್‌ನಿಂದ ಅನಧಿಕೃತ ಕರ್ಟೈಲ್ ಮೈಂಟ್ ಆದೇಶ ಆಗಿದ್ದು, ಇಂತಿಷ್ಟೇ ವಿದ್ಯುತ್ ಪಡೆಯಬೇಕು ಎಂದು ಸೂಚಿಸಲಾಗಿದೆ.