Select Your Language

Notifications

webdunia
webdunia
webdunia
webdunia

40 ಪರ್ಸೆಂಟ್‌ ಕಮಿಷನ್‌ ವಿವಾದ: ಪ್ರಧಾನಿ ಕಚೇರಿಯಿಂದ ಕೆಂಪಣ್ಣಗೆ ಬುಲಾವ್!

40 ಪರ್ಸೆಂಟ್‌ ಕಮಿಷನ್‌ ವಿವಾದ: ಪ್ರಧಾನಿ ಕಚೇರಿಯಿಂದ ಕೆಂಪಣ್ಣಗೆ ಬುಲಾವ್!
bangalore , ಮಂಗಳವಾರ, 28 ಜೂನ್ 2022 (20:46 IST)
ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಪರಧಾನಮಂತ್ರಿ ಕಚೇರಿಯಿಂದ ಬುಲಾವ್‌ ಬಂದಿದೆ ಎಂದು ಹೇಳಲಾಗಿದೆ.
ಮೋದಿ ಬೆಂಗಳೂರಿಗೆ ಬರುವ ಮುನ್ನ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಧಾನಿ ಕಾರ್ಯಾಲಯ ವರದಿ ತರಿಸಿಕೊಂಡಿತ್ತು. ಇದರ ಬೆನ್ನಲ್ಲೇ ಕಾಮಗಾರಿಗಳಿಗೆ ಶೇ.೪೦ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು.
ಇದೀಗ ಗೃಹ ಇಲಾಖೆಯ ತಂಡ ಈ ಎರಡೂ ಪ್ರಕರಣಗಳ ಕುರಿತು ತನಿಖೆ ನಡೆಸಲು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.
ದಾಖಲೆಯನ್ನು ಸಿದ್ದಪಡಿಸಿಕೊಳ್ಳಲು ಕೆಂಪಣ್ಣ ಅವರಿಗೆ ಪ್ರಧಾನಿ ಕಾರ್ಯಾಲಯ ಸೂಚಿಸಿದೆ ಎಂದು ಹೇಳಲಾಗಿದ್ದು, ಕೆಂಪಣ್ಣ ಅವರು ಪ್ರಧಾನಿ ಕಚೇರಿಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ನನಗೆ ಪ್ರಧಾನಿಯವರ ಕಚೇರಿಯಿಂದ ಕರೆ ಬಂದಿಲ್ಲ. ಯಾವುದೇ ನೊಟೀಸ್ ಕೂಡ ಬಂದಿಲ್ಲ. ನಾನು ಕೆಲಸದ ಮೇಲೆ ಮೈಸೂರಿಗೆ ಬಂದಿದ್ದೆ. ನನ್ನ ಆಫೀಸಿಗೆ ಒಬ್ಬರು ಆಗಮಿಸಿದ್ದರಂತೆ. ಅವರು ಕೆಲವು ದಾಖಲೆಗಳನ್ನ ಕೇಳಿದ್ದಾರೆ. ಬಳಿಕ ಆಫೀಸಿನಿಂದ ನನಗೆ ಕರೆ ಮಾಡಿ ತಿಳಿಸಿದ್ದಾರೆ ಎಂದು ಹೇಳಿದರು.
ಯಾರೋ ನಿಮ್ಮನ್ನ ಕೇಳಿಕೊಂಡು ಬಂದಿದ್ದಾರೆ. ನಿಮ್ಮ ಜೊತೆ ಮಾತನಾಡಬೇಕೆಂದು ಕೇಳ್ತಿದ್ದಾರೆ ಎಂದು ಕಚೇರಿ ಸಿಬ್ಬಂದಿ ತಿಳಿಸಿದರು. ನಾನು ಅವರನ್ನ ಯಾರೆಂದು ವಿಚಾರಿಸಿದೆ ಎಂದು ಹೇಳಿದ ಕೆಂಪಣ್ಣ, ಹೋಂ ಡಿಪಾರ್ಟಮೆಂಟ್ ನಿಂದ ಬಂದಿದ್ದೇವೆ ಎಂದ್ರು. ನಿಮ್ಮನ್ನ ಭೇಟಿಯಾಗಬೇಕು ಎಂದರು. ನಾನು ಇಂದು ಸಿಗ್ತೇನೆ ಎಲ್ಲಿಗೆ ಬರಬೇಕೆಂದು ಕೇಳಿದ್ದೇನೆ. ಅವರು ಹೇಳಿದ ಜಾಗಕ್ಕೆ ನಾವು ಹೋಗ್ತೇವೆ. ನಮ್ಮ ಕಾರ್ಯದರ್ಶಿ ಕರೆದುಕೊಂಡು ಹೋಗ್ತೇನೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಾಡುಹಗಲೇ ಹಿಂದೂ ಅಂಗಡಿ ಮಾಲೀಕನ ಶಿರಚ್ಛೇದ!