ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ನಲ್ಲಿಂದು ಗುತ್ತಿಗೆದಾರರಿಂದ ಶೇ.40ರ ಕಮೀಷನ್ ಪಡೆಯುತ್ತಿರುವ ಆರೋಪ ಕುರಿತ ವಿಚಾರವಾಗಿ ಇವತ್ತು ಗದ್ದಲ ಗಲಾಟೆಗೆ ಕಾರಣವಾಯ್ತು.
ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ಗುತ್ತಿಗೆದಾರರಿಂದ 40 ಪಸೆರ್ಂಟ್ ಕಮೀಷನ್ ಪಡೆಯುವುದು ಇನ್ನು ನಿಂತಿಲ್ಲ ಎನ್ನುವ ಕುರಿತು ಗುತ್ತಿಗೆದಾರರ ಸಂಘ ಮಾಡಿರುವ ಆರೋಪದ ಕುರಿತು ಮಾಧ್ಯಮಗಳ ವರದಿ ಉಲ್ಲೇಖಿಸಿ ಈ ಬಗ್ಗೆ ತನಿಖೆ ಆಗಬೇಕು ಎಂದು ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಒತ್ತಾಯಿಸಿದರು.
ಸರ್ಕಾರದ ಪರ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ, ನಿನ್ನೆ ಸದನ ಮುಗಿದು ಇವತ್ತು ಸದನ ಶುರುವಾಗುವ ಮೊದಲು ಆದ ಘಟನೆಗಳ ಬಗ್ಗೆ ಮಾತ್ರ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಬೇಕು.
ಆದರೆ ಮಾಧ್ಯಮಗಳ ವರದಿ ಆಧರಿಸಿ ಆರೋಪ ಮಾಡುತ್ತಿದ್ದಾರೆ. ಯಾವ ಸಚಿವರು, ಶಾಸಕರು ಗುತ್ತಿಗೆದಾರರಿಂದ ಕಮೀಷನ್ ಪಡೆದಿದ್ದಾರೆ ಎಂದು ನಿಖರವಾಗಿ ಹೇಳಬೇಕು. ಪತ್ರಿಕೆಗಳಲ್ಲಿ ಬಂದಿದ್ದನ್ನೆಲ್ಲಾ ಇಲ್ಲಿ ತಂದು ಹೇಳುವಂತಿಲ್ಲ ಅಂತ ವಿರೋಧ ಮಾಡಿದರು.