Select Your Language

Notifications

webdunia
webdunia
webdunia
webdunia

ರಕ್ಷಣಾ ಕಾರ್ಯದ ವೇಳೆ ಗಾಯಗೊಂಡ ಪೊಲೀಸರಿಗೆ 4 ಲಕ್ಷ ರೂ. ಸಹಾಯಧನ ವಿತರಣೆ!

4 lakh to the injured policemen during the rescue operation
bangalore , ಬುಧವಾರ, 25 ಮೇ 2022 (20:20 IST)
ಪ್ರಾಣದ ಹಂಗು ತೊರೆದು ನಾಗರಿಕನ ರಕ್ಷಣೆ ವೇಳೆ ತೀವ್ರವಾಗಿ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಪೊಲೀಸ್ ಸಿಬ್ಬಂದಿಗೆ, ತಲಾ 2 ಲಕ್ಷ ರೂ. ಸಹಾಯಧನವನ್ನು ಇಲಾಖೆ ಬಿಡುಗಡೆ ಗೊಳಿಸಿ ಆದೇಶ ಮಾಡಲಾಗಿದೆ.
ತುಮಕೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ತುಮಕೂರು ಜಿಲ್ಲೆಯ ಲಿಂಗನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಪೆಟ್ರೊಲ್ ಸುರಿದುಕೊಂಡು ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು, ರಕ್ಷಿಸಲು ಹೋದ ಇಬ್ಬರು ಪೊಲೀಸ್ ಕಾನಸ್ಟೇಬಲ್ ಗಳು ಸುಟ್ಟ ಗಾಯಗಳಿಂದ ಅಸ್ಪತ್ರೆಗೆ ದಾಖಲಿಸಲಾಗಿತ್ತು.
ಜಿಲ್ಲಾ ಪೊಲೀಸ್ ಮುಖ್ಯಸ್ಥ ಶ್ರೀ ರಾಹುಲ್ ರವರು, ಗಾಯಾಳು ಪೊಲೀಸರನ್ನು ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಸುಟ್ಟ ಗಾಯಗಳಿಂದ ಅಸ್ಪತ್ರೆಗೆ ದಾಖಲಾದ ಕಾನ್ಸ್ಟೇಬಲ್ ಗಳು, ಪ್ರಸ್ತುತ ಚೇತರಿಸಿ ಕೊಳ್ಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಯಶೋಗಾಥೆಯಲ್ಲಿ ಭಾಗಿಯಾಗಿ: ಹೂಡಿಕೆದಾರರಿಗೆ ಮುಖ್ಯಮಂತ್ರಿ ಆಹ್ವಾನ