Select Your Language

Notifications

webdunia
webdunia
webdunia
webdunia

ಗುದದ್ವಾರದಲ್ಲಿ ಬಂಗಾರ ಇಟ್ಟುಕೊಂಡು ಅಕ್ರಮ ಸಾಗಾಟ ನಡೆಸುತ್ತಿದ್ದ ಮಹಿಳೆ ಅರೆಸ್ಟ್

ಗುದದ್ವಾರದಲ್ಲಿ ಬಂಗಾರ ಇಟ್ಟುಕೊಂಡು ಅಕ್ರಮ ಸಾಗಾಟ ನಡೆಸುತ್ತಿದ್ದ ಮಹಿಳೆ ಅರೆಸ್ಟ್
bengaluru , ಭಾನುವಾರ, 19 ಫೆಬ್ರವರಿ 2017 (13:20 IST)
ಅಕ್ರಮ ಸಾಗಾಟಗಾರರು ತಮ್ಮ ದಂಧೆಗೆ ಏನೆಲ್ಲ ಉಪಾಯ ಮಾಡುತ್ತಾರೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಮಹಿಳೆಯೊಬ್ಬರು ಗುದದ್ವಾರದಲ್ಲಿ ಬಂಗಾರ ಇಟ್ಟುಕೊಂಡು ಅಕ್ರಮ ಸಾಗಾಟ ಮಾಡುತ್ತಿದ್ದಾಗ ಬೆಂಗಳೂರು ಕೆಂಪೇಗೌಡ ಏರ್`ಪೋರ್ಟ್`ನಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ.


ಬ್ಯಾಂಕಾಕ್`ನಿಂದ ಬಂದಿದ್ದ ಮಹಿಳೆಯನ್ನ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಮಹಿಳೆ ಗುಪ್ತವಾಗಿ ಬಂಗಾರ ಇಟ್ಟುಕೊಂಡಿರವುದು ಬೆಳಕಿಗೆ ಬಂದಿದೆ. ಸುಮಾರು 12 ಲಕ್ಷ ರೂ. ಮೌಲ್ಯ ಬಂಗಾರ ಸಿಕ್ಕಿದೆ.

ಮತ್ತೊಂದು ಪ್ರಕರಣದಲ್ಲಿ ಕ್ಲೀನಿಂಗ್ ಉಪಕರಣದಲ್ಲಿ 14 ಲಕ್ಷ ಮೌಲ್ಯದ ಬಂಗಾರ ಸಾಗಿಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಒಟ್ಟಾರೆ ಇವತ್ತು 4 ಪ್ರಕರಣಗಳನ್ನ ಭೇದಿಸಿರುವ ಏರ್`ಪೋರ್ಟ್ ಅಧಿಕಾರಿಗಳು 37 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರವನ್ನ ವಶಪಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ರಕರ್ತರ ಪ್ರಶ್ನೆಗೆ ವಿಚಲಿತರಾದ ಅಖಿಲೇಶ್ ಯಾದವ್