ವೇದಾಂತ್ ದಿಯೋಕಟೆ ಅನ್ನೋ 15ರ ಈ ಪೋರನಿಗೆ ಅಮೆರಿಕಾ ನ್ಯೂಜೆರ್ಸಿಯ ಜಾಹೀರಾತು ಕಂಪನಿ ವರ್ಷಕ್ಕೆ 33 ಲಕ್ಷ ರೂಪಾಯಿ ಪ್ಯಾಕೇಜ್ ನೀಡಿ ಜಾಬ್ ಆಫರ್ ಕೊಟ್ಟಿದೆ. ನಾಗಪುರದ ಈ ಪೋರ, ತನ್ನ ತಾಯಿಯ ಹಳೇ ಲ್ಯಾಪ್‌ಟಾಪ್‌ನಲ್ಲೇ ಇನ್ಸ್‌ಸ್ಟಾ ಬ್ರೋಸಿಂಗ್ ಮಾಡ್ತಾ ವೆಬ್‌ಸೈಟ್ ಡೆವಲಪ್‌ಮೆಂಟ್ ಕಾಂಪಿಟೇಷನ್‌ನಲ್ಲಿ ಪಾಲ್ಗೊಂಡಿದ್ದ. 2 ದಿನದಲ್ಲಿ 2066 ಕೋಡ್ ಲೈನ್‌ಗಳನ್ನ ಬರೆದಿದ್ದ. ಆ ಮೂಲಕ ತನ್ನ ಕನಸಿನ ಅಮೆರಿಕ ಕಂಪನಿಯ ಕೆಲಸ ಗಿಟ್ಟಿಸಿದ್ದ.
ವಿಶ್ವದ 1000 ಸ್ಪರ್ಧಿಗಳಲ್ಲೇ ವೇದಾಂತ್ ಮೊದಲಿಗ. ವರ್ಷಕ್ಕೆ 33 ಲಕ್ಷ ಪ್ಯಾಕೇಜ್ ನೀಡಿ ನ್ಯೂಜೆರ್ಸಿಯ ಜಾಹೀರಾತು ಕಂಪನಿ ಕೆಲಸದ ಆಫರ್ ನೀಡಿತ್ತು. ಆಮೇಲೆ ಈತನಿಗೆ ಬರೀ 15 ವರ್ಷವೆಂದು ತಿಳಿದು ಆಫರ್‌ನ ಹಿಂಪಡೆದಿದೆ. ಆದರೆ, ನಿಶಾಂತ್ ನಿರಾಶನಾಗಬೇಡ. ಮೊದಲು ಓದು ಕಂಪ್ಲೀಟ್ ಮಾಡು, ಆ ಮೇಲೆ ಕೆಲಸಕ್ಕೆ ಸಂಪರ್ಕಿಸು ಅಂತಾ ಕಂಪನಿ ವೇದಾಂತ್‌ಗೆ ಭರವಸೆ ನೀಡಿದೆ. ವೇದಾಂತ್, ವೆಬ್‌ಸೈಟ್‌ನ ಡೆವಲೆಪ್ ಮಾಡಿದ್ದಾನೆ. ಇದರಲ್ಲಿ ಯೂಟ್ಯೂಬ್‌ನಂತೆ ವಿಡಿಯೋಗಳನ್ನ ಅಪ್‌ಲೋಡ್ ಮಾಡಬಹುದು. ವಿಡಿಯೋ ನೋಡುವ ಫ್ಯೂಚರ್ಸ್ ಇದರಲ್ಲಿವೆ.
ಓದಿನ ಕಡೆ ಗಮನ ಕಡಿಮೆ ಆದೀತೆಂದು ತಾಯಿ ಲ್ಯಾಪ್‌ಟಾನ್‌ನ ಲಾಕರ್‌ನಲ್ಲಿರಿಸಿದ್ರೇ, ಮೊಬೈಲ್ ಕಾರಿನಲ್ಲೇ ಬಿಟ್ಟಿರ್ತಾರಂತೆ. ..