Select Your Language

Notifications

webdunia
webdunia
webdunia
webdunia

300 ಕೋಟಿ ದುರ್ಬಳಕೆ,KSOU ಅಧಿಕಾರಿಗಳ ವಿರುದ್ಧ CBI ಕೇಸ್

KSOU official
bangalore , ಶುಕ್ರವಾರ, 6 ಅಕ್ಟೋಬರ್ 2023 (20:20 IST)
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಯೋಜನೆಯಡಿ ಸುಮಾರು 300 ಕೋಟಿ ರು.ಗೂ ಹೆಚ್ಚು ನಿಧಿಯನ್ನು ದುರ್ಬಳಕೆ ಮಾಡಿರುವ ಆರೋಪ ಸಂಬಂಧ ಅಪರಿಚಿತ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣವೊಂದನ್ನು ದಾಖಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಮೈಸೂರು ಮೂಲದ ಮುಕ್ತ ವಿಶ್ವವಿದ್ಯಾಲಯವು ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಯೋಜನೆಯನ್ನು ಇಡೀ ದೇಶ ಹಾಗೂ ವಿದೇಶಗಳಲ್ಲಿಯೂ ಆರಂಭಿಸಿದೆ. 2013-14 ಮತ್ತು 2014-15ನೇ ಸಾಲಿನ ಹಣಕಾಸಿನ ವರ್ಷದಲ್ಲಿ ವಿಶ್ವವಿದ್ಯಾಲಯದ ಆಯವ್ಯಯ ವರದಿ ಪರಿಶೀಲನೆ ವೇಳೆ ಇದು ಬೆಳಕಿಗೆ ಬಂದಿದೆ. ಸಹಭಾಗಿತ್ವ ಸಂಸ್ಥೆಗಳಿಂದ ಜಮೆಯಾಗಬೇಕಿದ್ದ 50 ಕೋಟಿ ರು. ಆಯವ್ಯಯ ವರದಿಯಲ್ಲಿ ಕಾಣೆಯಾಗಿರುವುದು ಪತ್ತೆಯಾಗಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಲ್ಲಿ ಕೈದಿ ಸಾವಿಗೀಡಾದರೆ ಕುಟುಂಬಕ್ಕೆ ಪರಿಹಾರ ಸರ್ಕಾರ