Select Your Language

Notifications

webdunia
webdunia
webdunia
webdunia

ಕೊರೊನಾಗೆ ಬಲಿಯಾದವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ

webdunia
ಸೋಮವಾರ, 21 ಸೆಪ್ಟಂಬರ್ 2020 (21:41 IST)
ಕೋವಿಡ್ – 19 ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಲಾಗಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಮಾರನಬೀಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಮಲ್ಲಪ್ಪ ತಳಗಡಿ ಅವರ ಕುಟುಂಬಕ್ಕೆ ಸರ್ಕಾರ ₹ 30 ಲಕ್ಷ ರೂಪಾಯಿ ಮುಂಜೂರು ಮಾಡಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.

ಕೋವಿಡ್ ಕ್ವಾರೈಂಟೈನ್ ಕೇಂದ್ರದ ಮೇಲ್ವಿಚಾರಕರಾಗಿ ಜಿಲ್ಲಾಡಳಿತದ ಆದೇಶದಂತೆ ಕರ್ತವ್ಯನಿರತರಾಗಿದ್ದ ಹಾನಗಲ್ ತಾಲ್ಲೂಕು ಮೊರಾಜಿ೯ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮಲ್ಲಪ್ಪ ಫಕೀರಪ್ಪ ತಳಗಡಿ ಅವರು ಕೋವಿಡ್ ಸೋಂಕಿಗೆ ತುತ್ತಾಗಿದ್ದರು.

ಕಳೆದ ಆಗಸ್ಟ್ 19ರಂದು ಮೃತರಾಗಿದ್ದರು. ನಿಯಮಾನುಸಾರ ಮೃತರ ಕುಟುಂಬಕ್ಕೆ ಪರಿಹಾರವಾಗಿ ₹ 30 ಲಕ್ಷ ಹಾಗೂ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia Hindi

ಮುಂದಿನ ಸುದ್ದಿ

ನದಿ ದಂಡೆಗೆ ಹೋದವರ ಕಥೆ ಹೀಗಾಗೋದಾ?