Select Your Language

Notifications

webdunia
webdunia
webdunia
webdunia

3 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕನ ಬಂಧನ

3 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕನ ಬಂಧನ
ಬೆಂಗಳೂರು , ಸೋಮವಾರ, 20 ಫೆಬ್ರವರಿ 2017 (19:20 IST)
ನಗರದಲ್ಲಿ ಕಾಮುಕರ ಹಾವಳಿಗೆ ಅಂತ್ಯವಿಲ್ಲದಂತಾಗಿದೆ. ಹೇಯ ಕೃತ್ಯಗಳು ಮನುಕುಲವನ್ನೇ ನಡುಗಿಸುತ್ತಿವೆ. ಮೂರುವರ್ಷದ ಬಾಲಕಿಯ ಮೇಲೆ 22 ವರ್ಷ ವಯಸ್ಸಿನ ಕಾಮುಕ ಮೇಲ್ವಿಚಾರಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. 
 
ನರ್ಸರಿ ಶಾಲೆಯಲ್ಲಿ ಓದುತ್ತಿರುವ ಬಾಲಕಿ ತನಗೆ ಖಾಸಗಿ ಭಾಗದಲ್ಲಿ ನೋವಾಗುತ್ತಿದೆ ಎಂದು ತೋರಿಸಿದಾಗ ಆತಂಕಗೊಂಡ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಚಿತಪಡಿಸಿದ್ದಾರೆ.
 
ಘಟನೆ ಕುರಿತಂತೆ ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ಪೋಸ್ಕೋ ಕಾಯ್ದೆಯಡಿ ದೂರು ನೀಡಿದಾಗ ಪೊಲೀಸರು ಆರೋಪಿ ಕಾಮುಕ ಮಂಜುನಾಥನನ್ನು ಬಂಧಿಸಿದ್ದಾರೆ. 
 
ಶಾಲೆಯ ಪ್ರಾಂಶುಪಾಲೆ ವೀಣಾರ ವಿರುದ್ಧವು ಬಾಲಕಿಯ ಪೋಷಕರು ನಿರ್ಲಕ್ಷ್ಯದ ವಿರುದ್ಧ ದೂರು ನೀಡಿದ್ದರಿಂದ ಅವರನ್ನು ಕೂಡಾ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಕಾಮುಕ ಮಂಜುನಾಥ್‌ನಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡದಂತಹ ಶಿಕ್ಷೆಯನ್ನು ನೀಡಬೇಕು ಎಂದು ಬಾಲಕಿಯ ಪೋಷಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ಸದ್ದಿಲ್ಲದೇ ವಿಐಪಿ ಆತಿಥ್ಯ