Select Your Language

Notifications

webdunia
webdunia
webdunia
webdunia

ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ಸದ್ದಿಲ್ಲದೇ ವಿಐಪಿ ಆತಿಥ್ಯ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ಸದ್ದಿಲ್ಲದೇ ವಿಐಪಿ ಆತಿಥ್ಯ
ಬೆಂಗಳೂರು , ಸೋಮವಾರ, 20 ಫೆಬ್ರವರಿ 2017 (18:59 IST)
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾಗೆ ವಿಐಪಿ ಆತಿಥ್ಯ ದೊರೆಯುತ್ತಿದೆ ಎಂದು ಖಾಸಗಿ ಚಾನೆಲ್ಲೊಂದು ವರದಿ ಮಾಡಿದೆ. 
 
 ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾಗೆ ವೈ-ಫೈ, ಟಿವಿ, ಸೇರಿದಂತೆ ಅನೇಕ ರಾಜೋಪಚಾರಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ.
 
ಶಶಿಕಲಾರನ್ನು ಸಾಮಾನ್ಯ ಕೈದಿಯಂತೆ ಪರಿಗಣಿಸಲಾಗುವುದು ಎಂದು ಹೇಳಿಕೆ ನೀಡಿದ್ದ ಜೈಲಿನ ಅಧಿಕಾರಿಗಳು ಇದೀಗ ಸದ್ದಿಲ್ಲದೇ ವಿಐಪಿ ಆತಿಥ್ಯ ನೀಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
 
ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಶಶಿಕಲಾ ಅವರನ್ನು ಚೆನ್ನೈ ಜೈಲಿಗೆ ವರ್ಗಾಯಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 
 
ಬೆಂಗಳೂರಿನ ಜೈಲು ಅಧಿಕಾರಿಗಳು ಶಶಿಕಲಾ ಅವರನ್ನು ಚೆನ್ನೈ ಜೈಲಿಗೆ ವರ್ಗಾಯಿಸಲು ಒಪ್ಪಿದರೆ ಯಾವುದೇ ಕಾನೂನು ಅಡೆತಡೆಗಳು ಎದುರಾಗುವುದಿಲ್ಲವೆಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಹಣ ಪತ್ತೆಯಾಗಿದ್ರೆ ಯಡ್ಡಿ ಮನೆಯಲ್ಲಿ ಜೀತ: ರಮೇಶ್ ಜಾರಕಿಹೊಳಿ ಸವಾಲ್