Select Your Language

Notifications

webdunia
webdunia
webdunia
webdunia

ನಕಲಿ ಮೇಲ್ ಐಡಿ ಬಳಸಿ ದುಬಾರಿ ವಸ್ತು ಖರೀದಿಸಿ ಅಮೆಜಾಗ್ ಗೇ ಪಂಗನಾಮ..!

ನಕಲಿ ಮೇಲ್ ಐಡಿ ಬಳಸಿ ದುಬಾರಿ ವಸ್ತು ಖರೀದಿಸಿ ಅಮೆಜಾಗ್ ಗೇ ಪಂಗನಾಮ..!
ಮೈಸೂರು , ಶುಕ್ರವಾರ, 3 ನವೆಂಬರ್ 2017 (15:23 IST)
ಮೈಸೂರು: ನಕಲಿ ಇ-ಮೇಲ್ ಬಳಸಿ ದುಬಾರಿ ಬೆಲೆ ವಸ್ತು ಖರೀದಿಸಿದ್ದವರು ಅಮೆಜಾನ್‌ ಕಂಪನಿಗೆ ಲಕ್ಷಾಂತರ ರೂ. ನಾಮ ಹಾಕಿರುವ ಪ್ರಕರಣ ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೆಂಕಟೇಶ್, ಆನಂದ್ ಹಾಗೂ ಶಶಿಕುಮಾರ್ ಎಂಬುವರು ಅಮೆಜಾನ್‌ ನಲ್ಲಿ ನಕಲಿ ಇ-ಮೇಲ್ ವಿಳಾಸ ನೀಡಿ ಖಾತೆ ತೆರೆದಿದ್ದಾರೆ. ಆನ್‌ ಲೈನ್ ಮೂಲಕ 45 ಸಾವಿರ ರೂ. ಹಣ ನೀಡಿ ಐಫೋನ್ 7 ತೆಗೆದುಕೊಂಡಿದ್ದರು. ಮೊಬೈಲ್ ಕೈಸೇರಿದ ಎರಡು ದಿನಗಳ ಬಳಿಕ ಅಮೆಜಾನ್‌ ಕಸ್ಟಮರ್ ಕೇರ್ ಗೆ ಕರೆ ಮಾಡಿ ಖಾಲಿ ಬಾಕ್ಸ್ ಬಂದಿರುವುದಾಗಿ ದೂರು ನೀಡಿದ್ದಾರೆ.

ಇದನ್ನ ಗಂಭೀರವಾಗಿ ಪರಿಗಣಿಸಿದ ಅಮೆಜಾನ್ ಮತ್ತೊಂದು ಐಫೋನ್ ರವಾನಿಸಿದೆ. ಇದು ತಲುಪಿದ ನಂತರ ಮತ್ತೆ ಕರೆ ಮಾಡಿ ಸುಳ್ಳು ದೂರು ನೀಡಿದ್ದಾರೆ. ಗ್ರಾಹಕನ ಸಹೋದರರು ಎಂದು ಹೇಳಿದ ಮತ್ತಿಬ್ಬರು, ಸುಮಾರು 3.17 ಲಕ್ಷ ಮೌಲ್ಯದ ವಿವಿಧ ಬಗೆಯ 8 ವಸ್ತು ಖರೀದಿಸಿ ಕಂಪನಿಯ ವಿಶ್ವಾಸರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಹಣ ವಾಪಸ್ ಪಡೆದಿದ್ದರು.

ಕಂಪನಿಯ ಆಂತರಿಕ ಲೆಕ್ಕ ಪರಿಶೋಧನೆಯ ವೇಳೆ ಈ ವಂಚನೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡ ಅಮೆಜಾನ್ ಸಂಸ್ಥೆ ಮೈಸೂರು ಪ್ರತಿನಿಧಿ ನಿಷಾದ್ ಶರ್ಮಾ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಗತ್ತಿನಾದ್ಯಂತ ವಾಟ್ಸಾಪ್ ಕ್ರ್ಯಾಷ್...!